ಮೆದುಳಿನ ಆಘಾತದಿಂದ ಯುವಕ ಮೃತ್ಯು
ಕುಂಬಳೆ: ಮೆದುಳಿನ ಆಘಾತ ದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತಪಟ್ಟನು. ಪೇರಾಲ್ ಮಾಳಿಯೇಕ್ಕಲ್ ಹೌಸ್‌ನ ಜವಾದ್ ಯಾನೆ ಫವಾದ್ (24) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ವೇಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಇವರು ಚೆರ್ಕಳದ ಅಂಗಡಿಯೊಂದರ ನೌಕರನಾಗಿದ್ದರು. ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ತಲುಪಿದ ಫವಾದ್‌ಗೆ ಅಸಹನೀಯ ತಲೆನೋವು ಉಂಟಾಗಿತ್ತೆನ್ನಲಾಗಿದೆ. ಕೂಡಲೇ ಕುಂಬಳೆ ಹಾಗೂ ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಂತ್ಯಸಂಸ್ಕಾರ ನಿನ್ನೆ ಸಂಜೆ ಪೇರಾಲ್ ಜುಮಾ ಮಸೀದಿ ಪರಿಸರದಲ್ಲಿ ನಡೆಯಿತು.
ದಿ| ಮಹಮೂದ್-ಆಯಿಶಾ ದಂಪತಿಯ ಪುತ್ರನಾದ ಮೃತರು ಸಹೋದರ ಜಂಶಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.