ಮೇಯರ್-ಕೆಎಸ್‌ಆರ್‌ಟಿಸಿ ಚಾಲಕನ ಮಧ್ಯೆ ತರ್ಕ: ತನಿಖೆಗೆ ಆದೇಶ

ತಿರುವನಂತಪುರ: ತಿರುವನಂತಪುರ ಮೇಯರ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮಧ್ಯೆಗಿನ ತರ್ಕಕ್ಕೆ ಸಂಬಂಧಿಸಿ ಕೆಎಸ್‌ಆರ್‌ಟಿಸಿ ಚಾಲಕ ಯದು ಎಂಬವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸುವಂತೆ ಮಾನವಹಕ್ಕು ಆಯೋಗ ಆದೇಶಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದ  ಬಗ್ಗೆ ದೂರು ಲಭಿಸಿದರೂ ಪೊಲೀಸರು  ಕೇಸು ದಾಖಲಿಸಿಕೊಂಡಿರಲಿಲ್ಲವೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಚಾಲಕ ಮಾನವ ಹಕ್ಕು ಆಯೋಗವನ್ನು ಸಮೀಪಿಸಿದ್ದರು. ತಿರುವ ನಂತಪುರ ಸಿಟಿ ಪೊಲೀಸ್ ಕಮಿಶನರ್ ಹಾಗೂ ಕೆಎಸ್‌ಆರ್‌ಟಿಸಿ  ಮೆನೇಜಿಂಗ್ ಡೈರೆಕ್ಟರ್ ತನಿಖೆ ನಡೆಸಿ ಒಂದು ವಾರದೊ ಳಗೆ ವರದಿ ಸಲ್ಲಿಸುವಂತೆ  ಮಾನವಹಕ್ಕು ಆಯೋಗ ಆದೇಶದಲ್ಲಿ ತಿಳಿಸಿದೆ.

You cannot copy contents of this page