ಮೈಸೂರಿನಲ್ಲಿ ವಾಹನ ಅಪಘಾತ : ವಯನಾಡಿನ ನೃತ್ಯ ಅಧ್ಯಾಪಿಕೆ ಮೃತ್ಯು

ವಯನಾಡು: ಮೈಸೂರಿನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮಾನಂತವಾಡಿ ನಿವಾಸಿಯಾದ ನೃತ್ಯ ಅಧ್ಯಾಪಿಕೆ ಮೃತಪಟ್ಟರು. ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್  ಮೈತ್ರಿ ನಗರದ ಜೋಸಿ-ರೀನ ದಂಪತಿಯ ಪುತ್ರಿ ಅಲೀಶ (36) ಮೃತಪಟ್ಟ ದುರ್ದೈವಿ. ಅಲೀಶ ಪತಿ ಜೋಬಿನ್ ಜೊತೆ ನೃತ್ಯ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದಾಗ ಗುರುವಾರ ಮಧ್ಯರಾತ್ರಿ  ಮೈಸೂರಿನಲ್ಲಿ ಅಪಘಾತ ಸಂಭವಿಸಿದೆ.  ಇವರು ಸಂಚರಿಸಿದ ಕಾರು ನಿಯಂತ್ರಣ ತಪ್ಪಿ ಮಗುಚಿ ಅಪಘಾತ ಸಂಭವಿಸಿ ದೆಯೆಂದು ತಿಳಿದುಬಂದಿದೆ.  ಗಂಭೀರ ಗಾಯಗೊಂಡ ಅಲೀಶರನ್ನು ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಿನ್ನೆ ಊರಿಗೆ ಕರೆದುಕೊಂಡು ಬರುತ್ತಿ ದ್ದಾಗ ಗುಂಡ್ಲುಪೇಟೆಗೆ ತಲುಪುತ್ತಿದ್ದಂತೆ ಆರೋಗ್ಯ ಸ್ಥಿತಿ ಹದಗೆಟ್ಟು ಸಾವು ಸಂಭವಿಸಿದೆ.    ಅಲೀಶ ಮಾನಂತ ವಾಡಿಯಲ್ಲಿ ಎಬಿಸಿಡಿ ಎಂಬ ನೃತ್ಯ ವಿದ್ಯಾಲಯ ನಡೆಸುತ್ತಿದ್ದರು.  ಟಿವಿ ಚ್ಯಾನೆಲ್‌ಗಳಲ್ಲಿ ಹಾಗೂ ಹಲವು ರಿಯಾಲಿಟಿ ಶೋಗಳಲ್ಲೂ ಇವರು ಭಾಗವಹಿ ಸಿದ್ದರು.  ಅಪಘಾತದಲ್ಲಿ ಗಾಯಗೊಂಡ ಜೋಬಿನ್ ಚಿಕಿತ್ಸೆಯಲ್ಲಿದ್ದಾರೆ.  ಮೃತರು ಪತಿ, ಪುತ್ರಿ  ಎಲೈನ ಎಡ್ವಿಕಾ ಜೋಬಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page