ಮೊಗ್ರಾಲ್‌ನಲ್ಲಿ  ಲಾರಿಗಳು ಪರಸ್ಪರ ಢಿಕ್ಕಿ ಗಂಭೀರ ಗಾಯಗೊಂಡು ಕ್ಯಾಬಿನ್‌ನೊಳಗೆ ಸಿಲುಕಿದ ಚಾಲಕನನ್ನು ರಕ್ಷಿಸಿದ ಅಗ್ನಿಶಾಮಕದಳ

ಮೊಗ್ರಾಲ್‌ಪುತ್ತೂರು:  ನಿಲ್ಲಿಸಿದ್ದ ಲಾರಿಯ ಹಿಂದೆ ಇನ್ನೊಂದು ಲಾರಿ ಢಿಕ್ಕಿ ಹೊಡೆದ ಪರಿಣಾಮ ಕ್ಯಾಬಿನ್‌ನಲ್ಲಿ ಸಿಲುಕಿ ಗಂಭೀರ ಗಾಯಗೊಂಡ ಚಾಲಕ ನನ್ನು ಕಾಸರಗೋಡು ಅಗ್ನಿಶಾಮಕದಳ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ ಘಟನೆ ಇಂದು ಬೆಳಿಗ್ಗೆ  6  ಗಂಟೆ ವೇಳೆಗೆ ಮೊಗ್ರಾಲ್ ಸೇತುವೆ ಬಳಿ  ನಡೆದಿದೆ.

ಮಂಗಳೂರಿನಿಂದ ಜಲ್ಲಿ ಕಲ್ಲು ಹೇರಿಕೊಂಡು ಪಯ್ಯನ್ನೂರಿಗೆ ಹೋಗುತ್ತಿದ್ದ ಟೋರಸ್ ವಾಹನ ಮೊಗ್ರಾಲ್ ಪುತ್ತೂರು ಸೇತುವೆ ಮೇಲೆ ನಿಲ್ಲಿಸಲಾಗಿದ್ದ ಇನ್ನೊಂದು ಟೋರಸ್ ವಾಹನದ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಟೋರಸ್ ವಾಹನದ ಕ್ಯಾಬಿನ್‌ನಲ್ಲಿ ಚಾಲಕ ತೃಶೂರು ಕೋಟ್ಟಕ್ಕರ ನಿವಾಸಿ  ಜೋಬಿ ಬಿಜು (22)  ಗಂಭೀರ ಗಾಯ ಗೊಂಡು ಸಿಲುಕಿಕೊಂಡಿದ್ದರು. ಅವರನ್ನು  ಕ್ಯಾಬಿನ್‌ನಿಂದ ಹೊರಗೆ ತೆಗೆಯಲು ಸಾಧ್ಯವಾಗದಾಗ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್  ಸಿ.ಎನ್. ವೇಣುಗೋ ಪಾಲ್‌ರ ನೇತೃತ್ವದ ತಂಡ ತಕ್ಷಣ ಘಟನೆ ನಡೆದ ಸ್ಥಳಕ್ಕಾಗಮಿಸಿ  ಹೈಡ್ರೋಲಿಕ್ ಕಟ್ಟರ್ ಉಪಯೋಗಿಸಿ ಅರ್ಧ ತಾಸಿನ ತನಕ ನಡೆಸಿದ ಕಠಿಣ ಪ್ರಯತ್ನದ ಫಲವಾಗಿ ಕ್ಯಾಬಿನ್ ಹಾಗೂ ಅದರ ಸ್ಟಿಯರಿಂಗ್ ರೋಡ್ ಕತ್ತರಿಸಿ ಅದರೊಳಗೆ ಸಿಲುಕಿದ್ದ ಜೋಬಿ ಬಿಜುರನ್ನು  ಹೊರಕ್ಕೆ ತೆಗೆದು ಬಳಿಕ ಅವರನ್ನು ಖಾಸಗಿ ಆಂಬುಲೆನ್ಸ್ ನಲ್ಲಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಕಾರ್ಯಾಚರಣೆ ನಡೆಸಿದ ಅಗ್ನಿಶಾ ಮಕದಳದ ತಂಡದ ಸಿಬ್ಬಂದಿಗಳಾದ ಅಜೇಶ್ ಕೆ.ಆರ್, ರಾಜೇಶ್ ಪಿ, ಅಮಲ್‌ರಾಜ್ ಟಿ, ಜಿತಿನ್‌ಕೃಷ್ಣನ್ ಕೆ.ವಿ, ಹೋಂಗಾರ್ಡ್  ಪ್ರವೀಣ್ ಟಿ.ವಿ ಎಂಬವರು ಒಳಗೊಂಡಿದ್ದರು.

You cannot copy contents of this page