ಮೊಬೈಲ್ ಪೋನ್ ಕೇಳಿ ಪಡೆದು ಅದರ ಡಾಟಾ ಡಿಲೀಟ್ ಮಾಡಿ ಬೆದರಿಕೆ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಕರೆ ಮಾಡ ಲೆಂದು ಯುವಕನಿಂದ ಮೊಬೈಲ್ ಫೋನ್ ಕೇಳಿ ಪಡೆದ ಬಳಿಕ ಅದರ ಡಾಟಾವನ್ನು ಅಳಿಸಿಹಾಕಿದ ನಂತರ ನಿನ್ನ ನಗ್ನ ಫೋಟೋ ನನ್ನ ಬಳಿ ಇದೆಯೆಂದು ಹೇಳಿ ಯುವಕನಿಗೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಇಬ್ಬರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೃಕರಿಪುರ ತಂಗಯಂ ಕಾವಿಲ್ ಚುವಟ್ಟ ನಿವಾಸಿ ಪ್ರಸಾದ್ ಕುಮಾರ್ ಯು.ಕೆ (31) ಎಂಬವರು ಈ ದೂರು ನೀಡಿದ್ದು, ಅದರಂತೆ ಇಮಾನ್ಮುಲ್ ಮತ್ತು ನಂದನ ಸುಕುಮಾರನ್ ಎಂಬಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು ವಿದ್ಯಾನಗರ ಕುಟುಂಬ ನ್ಯಾಯಾಲಯದ ಬಳಿಯಿರುವ ಸೂಪರ್ ಮಾರ್ಕೆಟ್ ಬಳಿ ಆರೋಪಿಗಳು ಅಗೋಸ್ತ್ ೭ರಂದು ಬೆಳಿಗ್ಗೆ ೧೦ ಗಂಟೆಗೆ ತನ್ನ ಮೊಬೈಲ್ ಫೋನ್ ಕೇಳಿ ಪಡೆದು ನಂತರ ಅದರಲ್ಲಿರುವ ಡಾಟಾ ಮಾಹಿತಿಯನ್ನು ಅಳಿಸಿದ ಬಳಿಕ ಬೆದರಿಕೆಯೊಡ್ಡಿದ್ದ ನೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಪ್ರಸಾದ್ ಕುಮಾರ್ ಆರೋಪಿಸಿದ್ದಾರೆ.

You cannot copy contents of this page