ಮೊಳಗಿತು ಸೈರನ್‌ಗಳು: ಜಿಲ್ಲೆಯ ಮೂರು ಕಡೆಗಳಲ್ಲಿ ಆಪರೇಶನ್ ಅಭ್ಯಾಸ್ ಅಣಕು ಕವಾಯತು
ಕಾಸರಗೋಡು: ಪಾಕಿಸ್ತಾನದ ಉಗ್ರರ ನೆಲೆಗಳಿಗೆ ಭಾರತೀಯ ಸೇನಾ ಪಡೆ ಆಪರೇಷನ್ ಸಿಂಧೂರ್ ಎಂಬ ಹೆಸರಲ್ಲಿ ನಿನ್ನೆ ನಸುಕಿನ ಜಾವ ಕ್ಷಿಪಣಿ ದಾಳಿ ನಡೆಸಿ ಅದು ಇಡೀ ವಿಶ್ವವನ್ನೇ ಚಕಿತಗೊಳಿಸಿದ ಬೆನ್ನಲ್ಲೇ ದೇಶದ ೩೦೦ ಕಡೆಗಳಲ್ಲಿ ಆಪರೇಶ್ ಅಭ್ಯಾಸ್ ಎಂಬ ಹೆಸರಲ್ಲಿ ನಿನ್ನೆ ಸಂಜೆ ನಡೆದ ಅಣಕು ಕವಾಯತಿನಂಗವಾಗಿ ಕಾಸರಗೋಡು ಜಿಲ್ಲೆಯ ಮೂರು ಕಡೆಗಳಲ್ಲಿ ಇಂತಹ ನಾಗರಿಕರ ಸುರಕ್ಷಾ ತಾಲೀಮು ನಡೆಸಲಾಯಿತು. ಅರ್ಧ ಗಂಟೆ ತನಕ ಈ ಸುರಕ್ಷಾ ತಾಲೀಮು ಮುಂದುವರಿ ಯಿತು. ಕಾಸರಗೋಡು ಸಿವಿಲ್ ಸ್ಟೇಶನ್ ಸಮುಚ್ಛಯದಲ್ಲಿರುವ ಸ್ಥಳೀಯಾಡಳಿತ ಸಂಸ್ಥೆಯ ಜಂಟಿ ನಿರ್ದೇಶಕರ ಕಾರ್ಯಾಲಯ ಮತ್ತು ಕಾಸರಗೋಡು ಮತ್ತು ಹೊಸದುರ್ಗ ಆರ್.ಡಿ.ಒ ಕಚೇರಿಗಳಲ್ಲಿ ಕಾರ್ಯಗಳಲ್ಲಿ ಈ ಅಣಕು ಕವಾಯತು ನಡೆಸಲಾಯಿತು. ಅಣಕು ಕವಾಯತು ಆರಂಭಗೊಳ್ಳುವಂತೆಯೇ ದಿಢೀರ್ ಆಗಿ ಮುಗಿಲು ಮುಟ್ಟುವ ಸೈರಾನ್ ಮೊಳಗಿದವು. ಜೊತೆಗೆ ಭಯಾನಕ ಬಾಂಬ್ ಸ್ಫೋಟದಂತಹ ಭಾರೀ ಸದ್ದುಗಳು ಕೇಳಿಸಿತು. ಇನ್ನೊಂದೆಡೆ ಜನರ ಮುಗಿಲು ಮುಟ್ಟುವ ಆರ್ತ ನಾದ ಕೇಳಿಬಂತು. ಇದೆಲ್ಲಾ ಜನರನ್ನು ಇದ್ದಕ್ಕಿದ್ದಂತೆಯೇ ಭಯಭೀತರಾಗುವ ರೀತಿಯ ಕ್ಷಣಗಳನ್ನು ನಿರ್ಮಿಸಿತು. ಇಂತಹ ಶಬ್ದಗಳು ಉಂಟಾದಾಕ್ಷಣ ಪೊಲೀಸರು, ಅಗ್ನಿಶಾಮಕದಳ, ವಿಪತ್ತು ನಿರ್ವಹಣಾ ಪಡೆ ಸಕಲ ಸಿದ್ಧತೆಗಳೊಂದಿಗೆ ಸ್ಥಳಕ್ಕೆ ಆಗಮಿಸಿತು. ಕಚೇರಿಯೊಳಗೆ ಸಿಲುಕಿಕೊಂಡವರು ರಕ್ಷಿಸಿ ಅವರಿಗೆ ಹೆಗಲಮೇಲೇರಿಸಿ ಹೊರತಂದರು. ಗಾಯಗೊಂಡವರ ಹಾಗೆ ನಟಿಸಿದವರನ್ನು ಅಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಸ್ಟ್ರಕ್ಚರ್‌ನಲ್ಲಿ, ಆಂಬುಲೆನ್ಸ್‌ಗೇರಿಸಿ, ಜನರಲ್ ಆಸ್ಪತ್ರೆಗೆ ಸಾಗಿಸಿದರು. ಇದೊಂದು ನಾಗರಿಕ ಸುರಕ್ಷಾ ತಾಲೀಮು ಆಗಿದ್ದರೂ ಅದು ನಡೆಯುವ ವೇಳೆ ಆ ಪ್ರದೇಶದಲ್ಲಿದ್ದ ಜನರಲ್ಲಿ ಯುದ್ಧದ ಅನುಭವ ಉಂಟುಮಾಡಿತು. ಯುದ್ಧ ವೇಳೆ ಬಾಂಬ್ ಇತ್ಯಾದಿ ದಾಳಿ ಉಂಟಾದಲ್ಲಿ ಅದ್ಯಾವ ರೀತಿಯ ರಕ್ಷಣಾ ಕಾರ್ಯಾಚರಣೆ ನಡೆಸಬೇಕು, ಜನರನು ಹೇಗೆ ರಕ್ಷಿಸಬೇಕು ಹಾಗೂ ಇಂತಹ ಸಂದರ್ಭದಲ್ಲಿ ಜನರು ಹೇಗೆ ಸ್ವಯಂ ರಕ್ಷಣೆ ಪಡೆಯಬೇಕು ಎಂಬುವುದರ ಬಗ್ಗೆ ಕವಾಯತಿನಲ್ಲಿ ಜನರಿಗೆ ಮಾಹಿತಿ ನೀಡಲಾಯಿತು.
ನಾಗರಿಕಾ ರಕ್ಷಾ ಪಡೆಗಳು, ಎನ್‌ಸಿಸಿ, ಸ್ಟುಡೆಂಟ್ ಪೊಲೀಸ್ ಕೆಡೆಟ್ ಗಳೂ ಈ ಅಣಕು ಕವಾಯತಿನಲ್ಲಿ ಪಾಲ್ಗೊಂಡರು. ಯುದ್ಧದ ವೇಳೆ ಕ್ಷಿಪಣಿ ದಾಳಿ ಯಿಂದ ಕಟ್ಟಡಗಳಲ್ಲಿ ಸಿಲುಕಿಕೊಂ ಡವರನ್ನು ಹೇಗೆ ರಕ್ಷಿಸಬೇಕೆಂಬ ಅರಿವನ್ನೂ ಕವಾಯತಿನಲ್ಲಿ ಜನರಿಗೆ ನೀಡಲಾಯಿತು.