ಯಶಸ್ವಿಯಾಗಿ ನಡೆಯುತ್ತಿರುವ ಅನ್ನದಾನ
ಶಬರಿಮಲೆ: ಶಬರಿಮಲೆಯಲ್ಲಿ ಹರಿದು ಬರುತ್ತಿರುವ ತೀರ್ಥಾ ಟಕರಿಗೆ ತಿರುವಿದಾಂಕೂರು ಮುಜ ರಾಯಿ ಮಂಡಳಿ ಮೂರು ಕಡೆಗ ಳಲ್ಲಿ ಉಚಿತ ಅನ್ನದಾನ ಮಂಟಪ ಆರಂಭಿಸಿದ್ದು ಇಲ್ಲಿಗೆ ಆಗಮಿಸಿ ಆಹಾರ ಸೇವಿಸು ವವರ ಸಂ ಖ್ಯೆಯೂ ದಿನೇ ದಿನೇ ಹೆಚ್ಚಾಗು ತ್ತಿದೆ. ಡಿಸೆಂಬರ್ 1ರ ತನಕದ ಲೆಕ್ಕಾಚಾರ ಪ್ರಕಾರ ಮಂಡಲ ಕಾಲದ ತೀರ್ಥಾಟನೆ ಆರಂಭಗೊAಡ ನಂತರ 3.52 ಲಕ್ಷ ಮಂದಿ ಇಲ್ಲಿ ಅನ್ನಪ್ರಸಾದ ಸೇವಿಸಿದ್ದಾರೆ. ಸನ್ನಿ ಧಾನ, ಪಂಪಾ ಮತ್ತು ನಿಲೈಕ್ಕಲ್ ನಲ್ಲಿ ಅನ್ನದಾನ ಮಂಟಪ ಏರ್ಪಡಿ ಸಲಾಗಿದೆ. ಈ ಪೈಕಿ ಡಿ. 1ರ ತನಕ ಸನ್ನಿಧಾನದಲ್ಲಿ 2.60 ಲಕ್ಷ ಮಂದಿ ತೀರ್ಥಾಟಕರು, ಪಂಪಾದಲ್ಲಿ 62,000 ಮಂದಿ ಹಾಗೂ ನಿಲೈಕಲ್ನಲ್ಲಿ 30,000 ಮಂದಿ ಅನ್ನಪ್ರಸಾದ ಸೇವಿಸಿದ್ದಾರೆ. ಅನ್ನದಾನ ಮಂಟಪಗಳಲ್ಲಿ ದೈನಂದಿನ ಮೂರು ಬಾರಿ ಆಹಾರ ನೀಡಲಾಗುತ್ತಿದೆ. ಬೆಳಿಗ್ಗೆ 6.30ರಿಂದ 11 ಗಂಟೆ ತನಕ ಬೆಳಿಗ್ಗಿನ ಆಹಾರ ರೂಪದಲ್ಲಿ ಸಜ್ಜಿಗೆ, ಕಡಲೆ ಪದಾರ್ಥ ಹಾಗೂ ಶುಂಠಿಕಾಫಿ ನೀಡಲಾಗುತ್ತಿದೆ.
11.45ರ ಬಳಿಕ ಮಧ್ಯಾಹ್ನ ದೂಟ ವಿತರಣೆ ಆರಂಭಗೊAಡು ಸಂಜೆ 4 ಗಂಟೆ ತನಕ ಮುಂದುವರಿ ಯುತ್ತದೆ. ಸಂಜೆ 6.30ರಿಂದ ಮಧ್ಯರಾತ್ರಿ ತನಕ ಗಂಜಿಯೂಟ ವಿತರಿಸಲಾಗುತ್ತದೆ. ಪಂಪಾದಲ್ಲಿ 130 ಮಂದಿ, ಸನ್ನಿಧಾನದಲ್ಲಿ 1000 ಮಂದಿ ಹಾಗೂ ನಿಲೈ ಕಲ್ನಲ್ಲಿ 100 ಮಂದಿ ಒಂದೇ ಬಾರಿ ಕುಳಿತು ಆಹಾರ ಸೇವಿ ಸುವ ಸೌಕರ್ಯ ಏರ್ಪಡಿಸಲಾಗಿದೆ.