ಯಶ್ವಂತ್‌ಪುರ್-ಕಣ್ಣೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರೀ ಕಳವು

ಕಣ್ಣೂರು: ಯಶ್ವಂತ್‌ಪುರ್-ಕಣ್ಣೂರು ಎಕ್ಸ್‌ಪ್ರೆಸ್ ರೈಲುಗಾಡಿ ಯಲ್ಲಿ ಭಾರೀ ಕಳವು ನಡೆದಿದೆ. ಪ್ರಯಾಣಿಕರ ಹಣ, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಮೊದಲಾದವುಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಇಂದು ಮುಂಜಾನೆ ಸೇಲಂ ಹಾಗೂ ಧರ್ಮಪುರಿ  ಮಧ್ಯೆ ರೈಲಿನ ಎಸಿ ಬೋಗಿಗಳಿಗೆ ನುಗ್ಗಿದ ಕಳ್ಳರು ಕಳವು ನಡೆಸಿದ್ದಾರೆ. ಘಟನೆ ವೇಳೆ ಪ್ರಯಾಣಿಕರು ನಿದ್ದೆಯಲ್ಲಿದ್ದ ರೆನ್ನಲಾಗಿದೆ. ಕಳ್ಳರು ಕೃತ್ಯ ನಡೆಸಿ ಮರಳಿದ ಬಳಿಕವಷ್ಟೇ ತಮ್ಮ ಸೊತ್ತುಗಳು ಕಳವಿಗೀಡಾಗಿರುವುದು ಪ್ರಯಾಣಿಕರ ಅರಿವಿಗೆ ಬಂದಿದೆ.

ಹಣ, ಚಿನ್ನಾಭರಣ ಮೊದಲಾದವುಗಳನ್ನು ದೋಚಿದ ಬಳಿಕ ಕಳ್ಳರು ಪ್ರಯಾಣಿಕರ ಬ್ಯಾಗ್‌ಗಳನ್ನು ರೈಲಿನ ಶೌಚಾಲಯದಲ್ಲಿ  ಉಪೇಕ್ಷಿಸಿರುವುದು ಕಂಡುಬಂದಿದೆ. ಇಪ್ಪತ್ತರಷ್ಟು ಮಂದಿಯ ಹಣ, ಚಿನ್ನಾಭರಣ, ಐಫೋನ್‌ಗಳು ಕಳವಿಗೀಡಾದ ಬಗ್ಗೆ  ದೂರಲಾಗಿದೆ. ಘಟನೆ ಬಗ್ಗೆ ಸೇಲಂ ರೈಲ್ವೇ  ಪೊಲೀಸರಿಗೆ ದೂರು ನೀಡಲಾಗಿದೆ.

RELATED NEWS

You cannot copy contents of this page