ಯುವಕನನ್ನು ಅಪಹರಿಸಿ ದರೋಡೆ : 5 ಮಂದಿ ವಿರುದ್ಧ ಕೇಸು

ಉಪ್ಪಳ: ಮಂಜೇಶ್ವರ ಕಡಂಬಾರು ಅರಿಮಲೆಯ ಪ್ರವೀಣ್ ಎ.(32) ಎಂಬ ವರನ್ನು ಆಟೋರಿಕ್ಷಾದಲ್ಲಿ ಅಪಹರಿಸಿ ಹಲ್ಲೆಗೈದು ಚಿನ್ನದ ಸರ, ಹಣ, ಮೊಬೈಲ್ ಫೋನ್ ದರೋಡೆಗೈದ ಪ್ರಕರಣದಲ್ಲಿ ಐದು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಕಡಂಬಾರು ನಿವಾಸಿಗಳಾದ ಶ್ರಾವಣ್, ಅಜಿತ್, ಪಾಚು, ಪ್ರಜಾಚು ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ಕಾನೂನು ವಿರುದ್ಧವಾಗಿ ಗುಂಪುಸೇರುವಿಕೆ, ಅಪಹರಣ, ಹಲ್ಲೆ ಮೊದಲಾದ ಕಾಯ್ದೆ ಪ್ರಕಾರ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಕಡಂಬಾರ್‌ನಲ್ಲಿ  ನಡೆದುಹೋಗುತ್ತಿದ್ದ ಪ್ರವೀಣ್‌ರನ್ನು ತಂಡ ಹಲ್ಲೆ ನಡೆಸಿ ಆಟೋರಿಕ್ಷಾದಲ್ಲಿ ಬಂದ್ಯೋಡು ವೀರನಗರಕ್ಕೆ ತಲುಪಿಸಿ ಅಲ್ಲಿಯೂ ಹಲ್ಲೆ ನಡೆಸಿದ ಬಳಿಕ ಅವರ ಕುತ್ತಿಗೆಯಲ್ಲಿದ್ದ ಒಂದು ಪವನ್ ಚಿನ್ನದ ಸರ, ಜೇಬಿನಲ್ಲಿದ್ದ 12,200 ರೂ. ಹಾಗೂ ಮೊಬೈಲ್ ಫೋನ್ ಕಸಿದು ತಂಡ ಪರಾರಿಯಾಗಿತ್ತು.

You cannot copy contents of this page