ಯುವಕನ ಅಪಹರಣ ಯತ್ನ: ವಿಫಲಗೊಂಡಾಗ ಸ್ಕೂಟರ್, ಮೊಬೈಲ್, ಪರ್ಸ್ ಕಸಿದು ತಂಡ ಪರಾರಿ

ಕಾಸರಗೋಡು: ಯುವಕನನ್ನು ತಂಡವೊಂದು ಕಾರಿನಲ್ಲಿ ಅಪಹರಿಸಲು ಯತ್ನಿಸಿದ ಬಗ್ಗೆ ದೂರಲಾಗಿದೆ. ಇದರಂತೆ ಉದುಮ ಪಾಕ್ಕಾರ ಹೌಸ್‌ನ ಎನ್.ಬಿ. ಸೈನುಲ್ ಆಬಿದ್ ನೀಡಿದ ದೂರಿನಂತೆ ಇರ್ಶಾದ್ ಹಾಗೂ ಇತರ ನಾಲ್ಕು ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ೬.೪೫ರ ವೇಳೆ ಘಟನೆ ನಡೆದಿದೆ. ಉದುಮ ಬಸ್ ನಿಲ್ದಾಣ ಸಮೀಪದಲ್ಲಿ ನಿಂತಿದ್ದ ಸೈನುಲ್ ಆಬಿದ್‌ರನ್ನು ಕಾರಿನಲ್ಲಿ ತಲುಪಿದ ಇರ್ಶಾದ್ ಹಾಗೂ ತಂಡ ಬಲವಂತ ವಾಗಿ ಕಾರಿಗೆ ಹತ್ತಿಸಲು ಯತ್ನಿಸಿದೆ.

ತಂಡದ ಕೈಯಿಂದ ತಪ್ಪಿಸಲೆತ್ನಿಸಿ ದಾಗ ಸೈನುಲ್ ಆಬಿದ್‌ರ ಸ್ಕೂಟರ್, ಪರ್ಸ್, ಫೋನ್ ಕಸಿದು ತಂಡ ಪರಾರಿಯಾಗಿದೆ ಎಂದು ದೂರಲಾಗಿದೆ. ಉದ್ಯೋಗ ಸಂಬಂಧ ದೂರುಗಾರನಿಗೆ ನೀಡಿದ ೫೦೦ ಡಾಲರ್ ಮರಳಿ ನೀಡದ ದ್ವೇಷವೇ ಆಕ್ರಮಣಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page