ಯುವಕ ನಿಗೂಢ ನಾಪತ್ತೆ

ಬದಿಯಡ್ಕ: ಕರ್ನಾಟಕ ದಲ್ಲಿರುವ ಸಹೋದರನ ಮನೆಗೆಂದು ತಿಳಿಸಿ ಹೋದ ಯುವಕ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮೂಲತಃ ಕರ್ನಾಟಕ ನಿವಾಸಿಯೂ, ಬದಿಯಡ್ಕ ಪಂಚಾಯತ್ ವ್ಯಾಪ್ತಿಯ ಪಾಡ್ಲಡ್ಕ ಚಾಲಕುನ್ನು ಎಂಬಲ್ಲಿ ವಾಸಿಸುವ ಸಾಗರ್ (42) ನಾಪತ್ತೆಯಾದ ವ್ಯಕ್ತಿ. ಇವರ ಪತ್ನಿ ಸೀತು ಈ ಬಗ್ಗೆ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಈ ತಿಂಗಳ ೧೮ರಂದು  ಸಾಗರ್ ಕರ್ನಾಟಕದ ಕೊಪ್ಪಳ ಮೀಯಪುರ ಎಂಬಲ್ಲಿರುವ ಸಹೋದರನ ಮನೆಗೆಂದು ತಿಳಿಸಿ ಹೋಗಿದ್ದಾರೆನ್ನಲಾಗಿದೆ. ಆದರೆ ಅವರು ಮರಳಿ  ಬಾರದ ಹಿನ್ನೆಲೆಯಲ್ಲಿ ಸಹೋದರನನ್ನು ಸಂಪರ್ಕಿಸಿದಾಗ ಅಲ್ಲಿಗೆ ತಲುಪಿಲ್ಲವೆಂದು ತಿಳಿದು ಬಂದಿದೆ. ಸಾಗರ್‌ರ ಮೊಬೈಲ್ ಫೋನ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page