ಯುವಕ ಸಹೋದರನ ನಿರ್ಮಾಣ ಹಂತದ ಮನೆಯಲ್ಲಿ ನೇಣು ಬಿಗಿದು ಸಾವು
ಕಾಸರಗೋಡು: ಟೆಂಪೋ ಟ್ರಾವೆಲರ್ ಮಾಲಕನಾದ ಯು ವಕ ಸಹೋದರನಿಗೆ ನಿರ್ಮಿಸುತ್ತಿರುವ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೀಮೇನಿ ಚೆಂಬ್ರಕಾನ ಕಯ್ಯೂರು ರೋಡ್‌ನ ನೂಞ ಎಂಬಲ್ಲಿನ ಶ್ರೀನಿವಾಸನ್ (40) ಮೃತ ವ್ಯಕ್ತಿ. ಇಂದು ಬೆಳಿಗ್ಗೆ ನಿರ್ಮಾಣ ನಡೆಯುತ್ತಿದ್ದ ಮನೆಯೊಳಗೆ ಇವರ ಮೃತದೇಹ ಪತ್ತೆಯಾಗಿದೆ. ಶ್ರೀನಿವಾಸನ್ ರ ತಾಯಿ ಈ ಹಿಂದೆ ನಿಧನ ಹೊಂದಿ ದ್ದಾರೆ. ಅನಂತರ ಅಸೌಖ್ಯ ಬಾಧಿಸಿದ್ದ ತಂದೆ ಹಾಗೂ ಪತ್ನಿ, ಮಗುವಿನೊಂದಿಗೆ ಶ್ರೀನಿವಾಸನ್ ವಾಸಿಸುತ್ತಿದ್ದರು. ಆದರೆ ಪತ್ನಿ ಹಾಗೂ ಮಗು ದೀರ್ಘ ಕಾಲದಿಂದ ಬೇರೆ ವಾಸಿಸುತ್ತಿದ್ದಾರೆ. ತಂದೆಗೆ ಶುಶಷೆ ನೀಡಲು ಹೋಂ ನರ್ಸನ್ನು ನೇಮಿಸಿ ದ್ದರು.