ಯುವತಿಯನ್ನು ಕುತ್ತಿಗೆ ಕೊಯ್ದು ಕೊಲೆಗೈದ ಪತಿ

ಕೊಚ್ಚಿ: ಯುವತಿಯನ್ನು ಪತಿ ಕುತ್ತಿಗೆ ಕೊಯ್ದು ಕೊಲೆಗೈದ ಘಟನೆ ಪೆರುಂಬಾವೂರಿನಲ್ಲಿ ನಡೆದಿದೆ.  ಅಲ್ಲಿನ ಬಂಗಾಳ ಕಾಲನಿಯಲ್ಲಿ ವಾಸಿಸುವ  ಅನ್ಯ ರಾಜ್ಯ ಕಾರ್ಮಿಕೆ ಮಾಮಣಿ ಚೇತ್ರಿ (39) ಎಂಬಾಕೆ ಕೊಲೆಗೀ ಡಾದ ಯುವತಿ.  ಮಾಮಣಿಯ ಪತಿ ಬಹದ್ದೂರ್ ಚೇತ್ರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರು ಬಂಗಾಳ ಕಾಲನಿಯಲ್ಲಿ ಹೋಟೆಲ್ ನಡೆಸುತ್ತಿದ್ದರು.  ಬಹ ದ್ದೂರ್ ಪತ್ನಿಯ ಮೇಲೆ ಸಂಶಯ ಗೊಂಡಿದ್ದು, ಇದು ಅವರಿಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು.  ಇಂದು ಬೆಳಿಗ್ಗೆ  ಮತ್ತೆ  ವಾಗ್ವಾದ ನಡೆದಿದ್ದು, ಈ ವೇಳೆ ಬಹದ್ದೂರ್ ಚಾಕುವಿನಿಂದ ಮಾಮಣಿಯ ಕುತ್ತಿಗೆಗೆ ಇರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಘಟನೆ ಕಂಡ ಸ್ಥಳೀಯರು ಮಾಮಣಿಯನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

Leave a Reply

Your email address will not be published. Required fields are marked *

You cannot copy content of this page