ಯುವತಿಯ ಬೆರಳಲ್ಲಿ ಸಿಲುಕಿಕೊಂಡ ಉಂಗುರ: ಸುರಕ್ಷಿತವಾಗಿ ತೆಗೆದ ಅಗ್ನಿಶಾಮಕ ದಳ
ಕಾಸರಗೋಡು: ಕೈಯ ಬೆರಳಿನಲ್ಲಿ ಸಿಲುಕಿಕೊಂಡ ಉಂಗುರವನ್ನು ಸುರಕ್ಷಿತವಾಗಿ ಅಗ್ನಿಶಾಮಕದಳದ ಅಧಿಕಾರಿಗಳು ತೆಗೆದಿದ್ದಾರೆ. ಮೊಗ್ರಾಲ್ ನಿವಾಸಿಯಾದ ೩೦ರ ಹರೆಯದ ಯುವತಿಯ ಬೆರಳಲ್ಲಿದ್ದ ಉಂಗುರವನ್ನು ಅಗ್ನಿಶಾಮಕ ದಳ ತೆಗೆದಿದೆ. ಹೊಸ ಉಂಗುರ ಖರೀದಿಸಿದಾಗ ಅದನ್ನು ತಪ್ಪಿ ಇನ್ನೊಂದು ಬೆರಳಿಗೆ ಹಾಕಿದ್ದು ಬಳಿಕ ತೆಗೆಯಲು ಸಾಧ್ಯವಾಗದೆ ಸಮಸ್ಯೆಯಾಗಿದೆ. ಎರಡು ದಿನ ಕಳೆದಾಗ ಬೆರಳು ಊದಿಕೊಂಡಿದ್ದು, ಉಂಗುರ ತೆಗೆಯಲು ಸಾಧ್ಯವಾಗಿ ರಲಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರನ್ನು ಸಂಪರ್ಕಿಸಿದ್ದು, ಅವರು ತಲುಪಿ ಬೆರಳಿನಿಂದ ಉಂಗುರವನ್ನು ತೆಗೆದಿದ್ದಾರೆ.