ರಬ್ಬರ್ ಶೀಟ್ ಸೇರಿದಂತೆ ೨.೩೦ ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು: ಓರ್ವ ಸೆರೆ

ಮುಳ್ಳೇರಿಯ: ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರುನಲ್ಲಿರುವ ದಾಸ್ತಾನು ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ೧೫ ಕ್ವಿಂಟಾಲ್ ರಬ್ಬರ್ ಶೀಟ್ ಮತ್ತು ಮೂರು ಕ್ವಿಂಟಾಲ್ ಒಟ್ಟುಪಾಲಂ ಕಳವುಗೈದ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ.

ಕರ್ನಾಟಕ ಕೊಡಗು ಮೆದಿ ನಾಡು ದೇವರ್‌ಕೊಲ್ಲ ವಡಕ್ಕೇಡತ್ತ್ ಹೌಸಿನ ಕುಂಞಿಮೋನ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ, ಈ ಸಂಬಂಧ ಅಲ್ಲಿನ ಟ್ಯಾಪಿಂಗ್ ಕಾರ್ಮಿಕ ನೆಟ್ಟಣಿಗೆಯ ಜನಾರ್ದನ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ದೂರುಗಾರನ ಮಗನ ಹೆಸರಲ್ಲಿರುವ ಕಟ್ಟಡದಲ್ಲಿ ಈ ಮಾಲುಗಳನ್ನು ದಾಸ್ತಾನು ಇರಿಸಲಾಗಿತ್ತು. ೨೦೨೨ ಎಪ್ರಿಲ್‌ನಿಂದ ೨೦೨೩ ಆಗಸ್ಟ್ ೩೦ರ ಅವದಿಯೊಳಗಾಗಿ ರಬ್ಬರ್ ಶೀಟ್ ಇತ್ಯಾದಿ ಸೇರಿದಂತೆ ಒಟ್ಟು ೨,೩೦,೦೦೦ ಮೌಲ್ಯದ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page