ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಮಂಜೇಶ್ವರ ಏರಿಯಾ ರೈತ ಸಂಘದಿಂದ ಪೈವಳಿಕೆ ಅಂಚೆ ಕಚೇರಿಗೆ ಮಾರ್ಚ್
ಪೈವಳಿಕೆ: ರಸಗೊಬ್ಬರದ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ನಡೆದ ರೈತ , ಕಾರ್ಮಿಕರ ಪ್ರತಿಭಟನೆಯ ಅಂಗವಾಗಿ ಮಂಜೇಶ್ವರ ಏರಿಯಾ ರೈತ ಸಂಘದ ವತಿಯಿಂದ ಪೈವಳಿಕೆ ಅಂಚೆ ಕಚೇರಿ ಗೆ ಮಾರ್ಚ್ ನಡೆಸಲಾಯಿತು. ರೈತ ಸಂಘದ ಏರಿಯಾ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದÄ, ಕಾಸರಗೋಡು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಚಂದ್ರಶೇಖರನ್ ಮಾರ್ಚ್ ಉದ್ಘಾಟಿಸಿದÀರು. ಕೃಷಿ ಉಪಯೋ ಗದ ರಸಗೊಬ್ಬರದ ಬೆಲೆ ಏರಿಕೆ ಯಿಂದ ದೇಶದಾದ್ಯಂತ ಕೃಷಿಕರು ಕಂಗೆಟ್ಟಿದ್ದಾರೆ. ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಇಳಿಸದೆ ಉದ್ಯಮಿಗಳ ಪರ ನಿಂತಿದೆ, ನಿಜವಾದ ಅನ್ನದಾತನಾದ ರೈತನನ್ನು ಕಡೆಗಣಿಸಿದೆ ಎಂದು ಅವರು ಆರೋಪಿಸಿದರು. ಮಂಜೇಶ್ವರ ಏರಿಯಾ ರೈತ ಸಂಘದ ಗೀತಾ ಸಾಮಾನಿ, ಚಂದ್ರಹಾಸ ಶೆಟ್ಟಿ ಮಾಸ್ಟರ್,ರಾಮಚಂದ್ರ ಟಿ. ನೇತೃತ್ವ ವಹಿಸಿದ್ದರು. ಏರಿಯಾ ಕಾರ್ಯದರ್ಶಿ ಕೆ. ಅಶೋಕ್ ಭಂಡಾರಿ ಸ್ವಾಗತಿಸಿ, ಹುಸೇನ್ ಮಾಸ್ಟರ್ ವಂದಿಸಿದರು.