ರಸ್ತೆಯಲ್ಲಿ ತಲೆಬುರುಡೆ ಪತ್ತೆ
ಕಾಸರಗೋಡು: ರಸ್ತೆಯಲ್ಲಿ ತಲೆಬುರುಡೆಯೊಂದು ಪತ್ತೆಯಾಗಿ ದ್ದು, ಇದು ನಾಗರಿಕರಲ್ಲಿ ಭೀತಿ ಹುಟ್ಟಿ ಸಿದೆ. ಇಂದು ಬೆಳಿಗ್ಗೆ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್ಚಿಕ್ಕಾನ ಎಂಬಲ್ಲಿನ ರಸ್ತೆಯಲ್ಲಿ ತಲೆಬುರುಡೆ ಕಂಡುಬಂದಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಅದನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದು ಮನುಷ್ಯನದ್ದೇ ಅಥವಾ ಬೇರೆ ಯಾವುದಾದರೂ ಪ್ರಾಣಿಯದ್ದೇ ಎಂದು ದೃಢೀಕರಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.