ರಸ್ತೆಯಲ್ಲಿ ಬಾಕಿಯಾದ ಸರಕು ಲಾರಿ: ಸಂಚಾರಕ್ಕೆ ಅಡಚಣೆ

ಉಪ್ಪಳ: ಸರಕು ಸಾಗಾಟದ ಲಾರಿ ರಸ್ತೆಯಲ್ಲಿ ಕೆಟ್ಟು ನಿಂತ ಕಾರಣ ಶಿರಿಯ ದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ. ಕಾಸರ ಗೋಡು ಭಾಗದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿ ನಿನ್ನೆ ಮಧ್ಯಾಹ್ನ ಶಿರಿಯ ಸೇತುವೆ ಸಮೀಪ ನಿರ್ಮಾಣ ಹಂತದ ರಸ್ತೆಯಲ್ಲಿ ಟಯರ್ ಹೂತು ಹೋಗಿ ಬಾಕಿಯಾಗಿದೆ. ಇದರಿಂದ ರಸ್ತೆಯಲ್ಲಿ ಇತರ ವಾಹನಗಳಿಗೆ ಸಂಚರಿಸಲು ಕಷ್ಟ ವಾಗುತ್ತಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಡಚಣೆ ಸೃಷ್ಟಿಯಾಗಿತ್ತು.

You cannot copy contents of this page