ರಸ್ತೆಯಲ್ಲಿ ಬಿಯರ್ ಬಾಟಲಿ ಎಸೆದು ಸಂಘರ್ಷಕ್ಕೆ ಯತ್ನ : ಮೂವರ ವಿರುದ್ಧ ಕೇಸು ದಾಖಲು; ಬಿಗಿ ಭದ್ರತೆ 

ಕಾಸರಗೋಡು: ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕರು ಹಾಗೂ ಸ್ಥಳದಲ್ಲಿದ್ದ  ಕೆಲವರ ಮಧ್ಯೆ ಉಂಟಾದ ವಾಗ್ವಾದ ವೇಳೆ ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಪುಡಿಗೈದಿರುವುದಾಗಿ  ದೂರಲಾಗಿದೆ. ಘಟನೆಗೆ ಸಂಬಂಧಿಸಿ ಘರ್ಷಣೆಗೆ ಪ್ರಯತ್ನಿಸಲಾಯಿತೆಂಬ ಆರೋಪದಂತೆ ಮೂವರ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮನೀಶ್, ಅಬಿ, ಕಂಡರೆ ಪತ್ತೆಹಚ್ಚಬಹುದಾದ ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ರಾತ್ರಿ 12.30ರ ವೇಳ ಚೂರಿಯಲ್ಲಿ ಘಟನೆ ನಡೆದಿದೆ. ಬೈಕ್ ಪ್ರಯಾಣಿಕರಾದ ಯುವಕರು ಹಾಗೂ ಸ್ಥಳದಲ್ಲಿದ್ದ ಕೆಲವು ಯುವಕರ ಮಧ್ಯೆ ವಾಗ್ವಾದ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ಹೋದ ತಂಡ ಮರಳಿ ತಲುಪಿ ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಪುಡಿಗೈದಿ ರುವುದಾಗಿಯೂ  ಹೇಳಲಾಗುತ್ತಿದೆ. ವಿಷಯ ತಿಳಿದು ಇನ್‌ಸ್ಪೆಕ್ಟರ್ ನಳಿನಾಕ್ಷನ್‌ರ ನೇತೃತ್ವದ ಲ್ಲಿ ಪೊಲೀಸರು ತಲುಪಿ ಸ್ಥಳದಲ್ಲಿ  ಭದ್ರತೆ ಏರ್ಪಡಿಸಿದ್ದಾರೆ.

You cannot copy contents of this page