ರಸ್ತೆ ಅಪಘಾತ: ಗಾಯಾಳುಗಳಿಗೆ ಒಂದೂವರೆ ಲಕ್ಷ ರೂ.ಗಳ ಚಿಕಿತ್ಸೆ ಉಚಿತ

ಹೊಸದಿಲ್ಲಿ:  ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ಒಂದೂವರೆ ಲಕ್ಷ ರೂಪಾಯಿ ವರೆಗಿನ ಚಿಕಿತ್ಸೆ ಉಚಿತವಾಗಿ  ನೀಡುವ ಯೋಜನೆ ಈ ತಿಂಗಳ 5ರಿಂದಲೇ ಜ್ಯಾರಿಗೆ ಬಂದಿದೆ.  ಕೇಂದ್ರ ಉನ್ನತ ಸಾರಿಗೆ ಸಚಿವಾಲಯ ಈ ಬಗ್ಗೆ ವಿಜ್ಞಾಪನೆ ಹೊರಡಿಸಿದೆ. ಅಪಘಾತ ಸಂಭವಿಸಿದ ದಿನದಿಂದ 7 ದಿನಗಳ ವರೆಗೆ ಉಚಿತ ಚಿಕಿತ್ಸೆ ಲಭಿಸುವುದು.  ದೇಶದ ಎಲ್ಲಿಯಾದರೂ ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರಿಗೆ ನಿಬಂಧನೆಗಳಿಗೆ ಅನುಸರಿಸಿ ಈ ಚಿಕಿತ್ಸಾ ಸೌಲಭ್ಯ ಲಭಿಸಲಿದೆ. ಪೊಲೀಸ್, ಆಸ್ಪತ್ರೆಗಳು, ರಾಜ್ಯ ಆರೋಗ್ಯ ಏಜೆನ್ಸಿಗಳು ಎಂಬಿವರನ್ನು ಸೇರಿಸಿಕೊಂಡು  ಏರ್ಪಡಿಸಲಾದ ಯೋಜನೆಯ ಹೊಣೆಗಾರಿಕೆ ರಾಷ್ಟ್ರೀಯ ಆರೋಗ್ಯ ಅಥೋರಿಟಿಗಾಗಿರುವುದು. ರಾಜ್ಯಗಳಲ್ಲಿ  ಆಯಾ ರಸ್ತೆ ಸುರಕ್ಷಾ ಕೌನ್ಸಿಲರ್ ಯೋಜನೆಯ ಏಜೆನ್ಸಿಯಾಗಿ ರುವರು. ಚಿಕಿತ್ಸೆಗೆ ತಗಲುವ ಖರ್ಚಿನ ಮೊತ್ತವನ್ನು ಕೇಂದ್ರ ಸರಕಾರ ನೀಡಲಿದೆ.  2024 ಮಾರ್ಚ್ 14ರಂದು ಚಂಡೀಗರ್‌ನಲ್ಲಿ ಆರಂಭಿಸಿದ ಯೋಜನೆ 6 ರಾಜ್ಯಗಳಲ್ಲಿ ಪ್ರಯೋಗಾರ್ಥವಾಗಿ ಜ್ಯಾರಿಗೊಳಿಸಲಾಗಿತ್ತು. ಬಳಿಕ ಅದನ್ನು ದೇಶಾದ್ಯಂತ ವಿಸ್ತರಿಸಲಾಗಿದೆ.

You cannot copy contents of this page