ರಾಜ್ಯದಲ್ಲಿ ಕೋವಿಡ್‌ಗೆ ಮತ್ತೆ ಓರ್ವ ಬಲಿ: 1400 ದಾಟಿದ ಸೋಂಕಿತರ ಸಂಖ್ಯೆ

ಕೊಚ್ಚಿ: ರಾಜ್ಯದಲ್ಲಿ ಮತ್ತೆ ಹರಡತೊಡಗಿರುವ ಕೋವಿಡ್ 24 ವರ್ಷದ ಯುವತಿ ಪ್ರಾಣ ಅಪಹರಿ ಸಿದೆ.  ಕೋವಿಡ್ ಸೋಂಕು ತಗಲಿದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದರು. ಅದು ಫಲಕಾರಿ ಯಾಗದೆ ಅವರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸೋಂಕಿ ತರ ಸಂಖ್ಯೆ ಈಗ 1400ರ ಗಡಿ ದಾಟಿದೆ.  ಕಳೆದ ೨೪ ತಾಸುಗಳಲ್ಲಿ ಮಾತ್ರವಾಗಿ 24 ಮಂದಿಯಲ್ಲಿ ಕೋವಿಡ್ ದೃಢೀಕರಿಸಲ್ಪಟ್ಟಿದೆ.

ದೇಶದಲ್ಲಿ ಒಟ್ಟಾರೆಯಾಗಿ ಕೋವಿಡ್ ಸೋಂಕಿತರ ಸಂಖ್ಯೆ ೩೭೫೫ಕ್ಕೇರಿದೆ. ಇದರಲ್ಲಿ ೭ ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ವರದಿಗಳು ಸೂಚಿಸಿದೆ. ಆದರೆ ಈಗ ಸಾವನ್ನಪ್ಪಿದವರು ಇತರ ಕಾಯಿಲೆಗಳಿಂದ ಬಳಲುತ್ತಿರು ವವರೂ ಆಗಿದ್ದಾರೆಂದೂ,  ಆದ್ದರಿಂದ ಈ ಬಗ್ಗೆ ಹೆಚ್ಚಿನ ಆತಂಕಪಡ ಬೇಕಾದ ಅಗತ್ಯವಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page