ರಾಜ್ಯದಲ್ಲಿ ಬೆಳಿಗ್ಗಿನಿಂದಲೇ ಭರ್ಜರಿ ಮತದಾನ
ಕಾಸರಗೋಡು: ಲೋಕಸಭಾ ಚುನಾವಣೆಗಿರುವ ಮತದಾನ ಇಂದು ಬೆಳಿಗ್ಗೆ ಆರಂಭಗೊAಡಿರುವAತೆ ಯೇ ರಾಜ್ಯದಾದ್ಯಂತವಾಗಿ ಎಲ್ಲೆಡೆಗಳಲ್ಲೂ ಭ ರ್ಜರಿ ಮತದಾನ ನಡೆಯುತ್ತಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಆರಂಭಗೊAಡ ಮತದಾನ ಸಂಜೆ 6 ಗಂಟೆ ತನಕ ಮುಂದುವರಿಯಲಿದೆ. ಬೆಳಿಗ್ಗೆ 10 ಗಂಟೆ ವೇಳೆಯಲ್ಲೇ ರಾಜ್ಯದಲ್ಲಿ ಶೇ. 20ರಷ್ಟು ಮತದಾನ ನಡೆದಿದೆ.
ಈ ವೇಳೆ ಕಾಸರಗೋಡು ಕ್ಷೇತ್ರದಲ್ಲಿ ಶೇ. 20ರಷ್ಟು ಮತದಾನ ನಡೆದಿತ್ತು. ಮತದಾನ ಇದೇ ರೀತಿ ಸಂಜೆ ತನಕ ಮುಂದುವರಿದರೆ 2019 ಕ್ಕಿಂತಲೂ ದಾಖಲೆ ಮತದಾನ ಈ ಬಾರಿ ಉಂಟಾ ಗುವ ಸಾಧ್ಯತೆ ಇದೆ. ಮತದಾನ ಆರಂಭಗೊAಡಿರು ವಂತೆಯೇ ಕಾಸರಗೋಡು ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮತದಾನ ಯಂತ್ರಗಳು ದಿಢೀರ್ ಆಗಿ ಕೈಕೊಟ್ಟಿದೆ. ಅದು ಮತದಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿವಂತೆ ಮಾಡಿತು. ನಂತರ ಕೈಕೊಟ್ಟ ಎಲ್ಲಾ ಮತದಾನ ಯಂತ್ರ ತಕ್ಷಣ ಸರಿಪಡಿಸುವ ಮೂಲಕ ಮತದಾನ ಪ್ರಕ್ರಿಯೆ ಪುನರಾರಂಭಗೊAಡಿತು.
ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲೂ ಮತದಾರರ ಭಾರೀ ದೊಡ್ಡ ಸಾಲುಗಳು ಇಂದು ಬೆಳಿಗ್ಗಿನಿಂದಲೇ ಗೋಚರಿಸತೊಡಗಿದೆ. ಈತನಕ ಎಲ್ಲೆಡೆ ಶಾಂತಿಯುತ ರೀತಿಯಲ್ಲಿ ಮತದಾನ ನಡೆದಿದೆ. ಎಲ್ಲೆಡೆಗಳಲ್ಲೂ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಕಾಸರಗೋಡು ಲೋಕಸಬಾ ಕ್ಷೇತ್ರದ ಸಂಸದ ಹಾಗೂ ಯುಡಿಎಫ್ ಉಮೇ ದ್ವಾರ ರಾಜ್ಮೋಹನ್ ಉಣ್ಣಿತ್ತಾನ್ತಮ್ಮ ಪತ್ನಿ ಸಹಿತವಾಗಿ ಪಡನ್ನಕ್ಕಾಡ್ ಎಸ್ಎನ್ ಟಿಟಿಐ ಮತಗಟ್ಟೆಯಲ್ಲಿ ಇಂದು ಬೆಳಿಗ್ಗೆಯೇ ಮತದಾನಗೈದರು. ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕೊಡ್ಲಮೊಗರು ಅಡಕಳಕಟ್ಟೆಯ ಶ್ರೀ ವಾಣಿ ವಿಜಯ ಎಯುಪಿ ಶಾಲೆಯ 43ನೇ ನಂಬ್ರದ ಮತಗಟ್ಟೆಯಲ್ಲಿ ಇಂದು ಬೆಳಿಗ್ಗೆ ಮತ ಚಲಾಯಿಸಿದರು. ಕಾಸರಗೋಡು ಲೋಕಸಭಾ ಕ್ಷೇತ್ರದ ಪಯ್ಯನ್ನೂರು ಅತೀ ಹೆಚ್ಚು ಮತದಾನ ನಡೆದಿದೆ.
18ನೇ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಕೇರಳದ 20 ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 88 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಕೇರಳದ ಒಟ್ಟು 20 ಲೋಕಸಭಾ ಕ್ಷೇತ್ರಗಳಲ್ಲಾಗಿ 194 ಸೇರಿದಂತೆ ದ್ವಿತೀಯ ಹಂತದ ಚುನಾವಣೆಯಲ್ಲಿ ಒಟ್ಟು 1202 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗೆ ಒಟ್ಟಾರೆಯಾಗಿ ಇಂದು ಒಟ್ಟು 15.88 ಕೋಟಿ ಮತದಾರರು ಮತಚಲಾಯಿ ಸಲಿದ್ದಾರೆ. ಕೇರಳದ ಒಟ್ಟು 2,77,49,159 ಮತದಾರರೂ ಇದರಲ್ಲಿ ಒಳಗೊಂಡಿದ್ದಾರೆ.