ರಾಜ್ಯದ ಸಮುದ್ರ ಕರಾವಳಿಯಲ್ಲಿ ಶಂಕಿತ ಇರಾನ್ ಹಡಗು ಪತ್ತೆ: 6 ಮಂದಿ ವಶಕ್ಕೆ

ಕಲ್ಲಿಕೋಟೆ: ಕೇರಳ ಸಮುದ್ರ ದಡದಿಂದ ಸುಮಾರು 30 ನೋ ಟಿಕಲ್ ಮೈಲು ದೂರದ ಕಲ್ಲಿ ಕೋಟೆಗೆ ಸಮೀಪದ ಕೊಯಿಲಾಡಿ ಸಮುದ್ರದಲ್ಲಿ ಇರಾನಿನ ರಾಷ್ಟ್ರೀಯತೆಯ ವಿದೇಶಿ ಮೀನುಗಾರಿಕಾ  ಹಡಗೊಂಡು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಭಾರತೀಯ ಕೋಸ್ಟ್ ಗಾರ್ಡ್ ಹಡಗು ಅಭಿನವ್ ಸಿ-404 ಮತ್ತು ಭಾರತೀಯ ಕೋಸ್ಟ್‌ನ  ಗಾರ್ಡ್ ಅಡ್ವಾನ್ಸ್ಡ್‌ಲೈಟ್  ಹೆಲಿಕಾಫ್ಟರ್‌ನ ಸಹಾಯದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಳಿಕ ಅದನ್ನು ಕೊಚ್ಚಿ ಬಂದರಿಗೆ ಸಾಗಿಸಲಾಗಿದೆ.

ಈ ಶಂಕಿತ ಮೀನುಗಾರಿಕಾ ಹಡಗಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಅವರನ್ನೂ ಕೋಸ್ಟ್ ಗಾರ್ಡ್ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದೆ. ವಶಕ್ಕೊಳಗಾದ ಈ ಆರು ಮಂದಿ ಭಾರತೀಯರೇ ಆಗಿದ್ದು, ಇವರು ತಮಿಳುನಾಡಿನ ಕನ್ಯಾಕುಮಾರಿ ನಿವಾಸಿಯಾಗಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

ನಾವು ಮೀನುಗಾರಿಕೆ ಕೆಲಸಕ್ಕಾಗಿ ಇರಾನಿಗೆ ಹೋಗಿದ್ದೆವು. ಆದರೆ ಅಲ್ಲಿ ಸರಿಯಾಗಿ ವೇತನ ಲಭಿಸದಾಗ ನಾವು ಅಲ್ಲಿಂದ ತಪ್ಪಿಸಿಕೊಂಡಿದ್ದೆವು. ಆದರೆ ಅಲ್ಲಿಂದ ಭಾರತಕ್ಕೆ  ಬರಲು ಬೇರೆ ದಾರಿ ಕಾಣದಾದಾಗ ಅಲ್ಲಿನ ಬೋಟನ್ನೇ ಉಪಯೋಗಿಸಿ ನಾವು ಇಲ್ಲಿಗೆ ಬಂದಿದ್ದೇವೆಂದು ಈ ಆರು ಮಂದಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅವರ ಹೇಳಿಕೆಯನ್ನು ಕೋಸ್ಟ್ ಗಾರ್ಡ್ ಇನ್ನೂ  ಪೂರ್ಣವಾಗಿ ನಂಬಿಲ್ಲ.  ಬೋಟಿನಲ್ಲಿದ್ದವರು ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಗಳಾಗಿ ದ್ದಾರೆಯೇ ಎಂಬ ಬಗ್ಗೆಯೂ ಕೋಸ್ಟ್ ಗಾರ್ಡ್ ಮತ್ತು ಕೇಂದ್ರದ ಇತರ ಹಲವು ತನಿಖಾ ತಂಡಗಳೂ ಸಮಗ್ರ ತನಿಖೆ ಆರಂಭಿಸಿವೆ.  ಕೇಂದ್ರ ಗುಪ್ತಚರ ವಿಭಾಗ ರಾ, ಎನ್‌ಐಎ ತಂಡಗಳೂ ಈ ಬಗ್ಗೆ ಇನ್ನೊಂದೆಡೆ  ಸಮಾನಾಂತರ ತನಿಖೆ ಆರಂಭಿಸಿದ್ದು, ವಶಕ್ಕೊಳಗಾದ ಆರು ಮಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ಗೊಳಪಡಿಸುತ್ತಿದೆ. ಆ ಬಳಿಕವಷ್ಟೇ ಈ ವಿಷಯದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಭಾರತದ ಕಡಲ ಭದ್ರತೆಯ ಸಂಕೀರ್ಣv ಗಳನ್ನು ಮತ್ತು ಸಮುದ್ರದಲ್ಲಿ ಕಾನೂನುಬಾಹಿರ ಚಟುವಟಿಕೆ ಗಳನ್ನು ತಡೆಗಟ್ಟುವಲ್ಲಿ  ಹಾಗೂ ಕಡಲ ಕಾನೂನು ಜ್ಯಾರಿಗೊಳಿಸುವಲ್ಲಿ ಕೋಸ್ಟ್‌ಗಾರ್ಡ್ ಅದೆಷ್ಟು ಪ್ರಯತ್ನ ನಡೆಸುತ್ತಿದೆಯೆಂಬುವುದನ್ನು ಎತ್ತಿ ತೋರಿಸುತ್ತಿದೆ. ಈ ಘಟನೆಯಲ್ಲಿ ಭಾರತದ ಸಮುದ್ರ ಗಡಿಗಳನ್ನು ರಕ್ಷಿಸಲು ಮತ್ತು ಭಾರತದ ಕಡಲ ವಲಯಗಳಲ್ಲಿ  ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಐಸಿಜಿ ನಿರಂತರ ಪ್ರಯತ್ನ ನಡೆಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page