ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ ಫೆ.2ರಂದು

ಕಾಸರಗೋಡು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಫೆ.2ರಂದು ಅಪರಾಹ್ನ 2 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ವೆಂಕಟಭಟ್ ಎಡನೀರು ಇವರ ಅಧ್ಯಕ್ಷತೆಯಲ್ಲಿ ಸಮಾಲೋಚನ ಸಭೆ ನಡೆಯಲಿದೆ. ಅಪರಾಹ್ನ 2.30ಕ್ಕೆ ಪರಿಷತ್‌ನ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ.

ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಉದ್ಘಾಟಿಸು ವರು. ಎ.ಆರ್. ಸುಬ್ಬಯ್ಯಕಟ್ಟೆ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆ ತ್ತೋಡಿ ಅತಿಥಿಗಳಾಗಿ ಭಾಗವಹಿಸು ವರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಬಾಲಮಧುರ ಕಾನನ, ಜಯಾನಂದ ಪೆರಾಜೆ, ಶಾಂತಾ ಪುತ್ತೂರು, ರೇಖಾ ಸುದೇಶ್ ರಾವ್, ವಿಶಾಲಾಕ್ಷ ಪುತ್ರಕಳ, ಸುಭಾಷಿಣಿ ಚಂದ್ರ ಕನ್ನಟಿಪಾರೆ, ಕೆ. ನರಸಿಂಹ ಭಟ್ ಏತಡ್ಕ, ಪ್ರದೀಪ್ ಬೇಕಲ್ ಭಾಗವಹಿಸುವರು. ವಾಮನ್ ರಾವ್ ಬೇಕಲ್ ಪ್ರಸ್ತಾಪಿಸುವರು. ಬಳಿಕ ವಿರಾಜ್ ಅಡೂರು ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ. ಪ್ರೊ. ಎ. ಶ್ರೀನಾಥ್, ವಸಂತ ಕೆರೆಮನೆ, ಸಂಧ್ಯಾರಾಣಿ ಟೀಚರ್ ಉಪಸ್ಥಿತರಿರುವರು.

You cannot copy contents of this page