ರಾಜ್ಯ ಮಟ್ಟದ ಪ್ರಥಮ ಜರ್ನಲಿಸ್ಟ್ ಹಗ್ಗ ಜಗ್ಗಾಟ: ಮಲಪ್ಪುರಂ ಪ್ರೆಸ್‌ಕ್ಲಬ್ ಚಾಂಪಿಯನ್

ಕಾಸರಗೋಡು: ಕೇರಳ  ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಟನೆ (ಕೆಯುಡಬ್ಯುಜೆ) ಇದರ ಆಶ್ರಯದಲ್ಲಿ ಬೋಬಿ ಇಂಟರ್‌ನೇ ಶನಲ್ ಗ್ರೂಪ್‌ನ ಸಹಕಾರದೊಂದಿಗೆ ಕಾಸರಗೋಡು ಪ್ರೆಸ್‌ಕ್ಲಬ್ ಬಳಿ ನಿನ್ನೆ ನಡೆದ ರಾಜ್ಯಮಟ್ಟದ ಪ್ರಥಮ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಲಪ್ಪುರಂ ಪ್ರೆಸ್‌ಕ್ಲಬ್ ಚಾಂಪಿಯನ್ ಶಿಪ್ ಪಡೆದಿದೆ.

ಕಣ್ಣೂರು ಪ್ರೆಸ್‌ಕ್ಲಬ್ ರನ್ನರ್ ಆಫ್ ಸ್ಥಾನ ಪಡೆದುಕೊಂಡರೆ ದ್ವಿತೀಯ ರನ್ನರ್ ಆಫ್ ಪ್ರಶಸ್ತಿಯನ್ನು ಕೆಯುಡಬ್ಲ್ಯುಜೆಯ ರಾಜ್ಯ ತಂಡ  ಹಾಗೂ ತೃತೀಯ ರನ್ನರ್ ಆಫ್ ಸ್ಥಾನವನ್ನು  ಪತ್ತನಂತಿಟ್ಟ ಪ್ರೆಸ್ ಕ್ಲಬ್ ಪಡೆದಿದೆ. ನಿನ್ನೆ ಸಂಜೆ 5 ಗಂಟೆಗೆ ಆರಂಭಗೊಂಡ  ರಾಜ್ಯ ಮಟ್ಟದ ಹಗ್ಗಜಗ್ಗಾಟದಲ್ಲಿ ಕೆಯುಡಬ್ಲ್ಯುಜೆಯ ರಾಜ್ಯ ಸಮಿತಿ ತಂಡಗಳು ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳ ಪ್ರೆಸ್‌ಕ್ಲಬ್  ತಂಡಗಳೂ ಭಾಗವಹಿಸಿದ್ದವು. ಇದರ ಹೊರತಾಗಿ ಜನಪ್ರತಿನಿಧಿಗಳು ಹಾಗೂ ಸಿನಿಮಾ ನಟರುಗಳ ನಡುವೆ ಸೌಹಾರ್ದ ಸ್ಪರ್ಧೆಯೂ ನಡೆಯಿತು. ಇದು ಮಾತ್ರವಲ್ಲ ವಿವಿಧ ರಾಜಕೀಯ ಪಕ್ಷಗಳ ಯುವಜನ ಸಂಘಟನೆಗಳಾದ ಯುವಮೋರ್ಛಾ, ಡಿವೈಎಫ್‌ಐ, ಯೂತ್ ಕಾಂಗ್ರೆಸ್ , ಯೂತ್ ಲೀಗ್ ಹಾಗೂ ಎಐವೈ ಎಫ್‌ನ ತಂಡಗಳು ಸ್ಪರ್ಧೆಯಲ್ಲಿ ಭಾಗ ವಹಿಸಿ ಎಲ್ಲರನ್ನು  ಆವೇಶಭರಿ ತಗೊಳಿಸಿತು.

ಸ್ಪರ್ಧೆಯಲ್ಲಿ ಗೆದ್ದ ತಂಡಗಳಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಯಿತು.

Leave a Reply

Your email address will not be published. Required fields are marked *

You cannot copy content of this page