ರಾಜ್ಯ ಮಟ್ಟದ ಶಾಲಾ ಪ್ರವೇಶೋತ್ಸವ ಎರ್ನಾಕುಳಂನಲ್ಲಿ
ತಿರುವನಂತಪುರ: ರಾಜ್ಯ ಮಟ್ಟದಲ್ಲಿ ಶಾಲಾ ಪ್ರವೇಶೋತ್ಸವ ಜೂನ್ ೩ರಂದು ಎರ್ನಾಕುಳಂ ಜಿಲ್ಲೆಯ ಎಳಮಕ್ಕರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸುವರು.
ಶಾಲೆ ಆರಂಭಕ್ಕೆ ಸಂಬಂಧಪಟ್ಟ ಸಿದ್ಧತೆಗಳನ್ನು ಅವಲೋಕನ ನಡೆಸಲು ಅಧ್ಯಾಪಕ ಸಂಘಟನೆಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಸಚಿವ ವಿ. ಶಿವನ್ ಕುಟ್ಟಿ ನೇತೃತ್ವದಲ್ಲಿ ನಡೆಯಿತು. ಶಾಲಾ ಪ್ರವೇಶೋತ್ಸವದ ಯಶಸ್ವಿಗೆ ಅಧ್ಯಾಪಕ ಸಂಘಟನೆಗಳು ಭರವಸೆ ನೀಡಿವೆ.
ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಸಂಬಂಧ ೨೮ರಂದು ತಿರುವನಂತಪುರದಲ್ಲಿ ಶಿಕ್ಷಣಕಾನ್‌ಕ್ಲೇವ್ ನಡೆಯಲಿದೆ. ಶಿಕ್ಷಣರಂಗದ ತಜ್ಞರು ಭಾಗವಹಿಸುವರು.