ರಾಜ್ಯ ಸರಕಾರದ ಬಜೆಟ್: ವಿವಿಧ ಗ್ರಾಮ ಕಚೇರಿಗಳಲ್ಲಿ ಕಾಂಗ್ರೆಸ್‌ನಿಂದ ಧರಣಿ

ಪೈವಳಿಕೆ: ಕೇರಳ ಸರಕಾರದ ಹಾಲಿ ವರ್ಷದ ಬಜೆಟï‌ನಲ್ಲಿ ಭೂತೆರಿಗೆ ಹಾಗೂ ಇನ್ನಿತರ ತೆರಿಗೆ ಗಳನ್ನು ಹೆಚ್ಚು ಮಾಡುವ ಮೂಲಕ ಸರಕಾರ ಬಡವರ್ಗದ ಜನರ ಜೀವನವನ್ನು ದುಸ್ತರಗೊಳಿಸುತ್ತಿದೆ ಎಂದು ಆರÉÆÃಪಿಸಿ ಕೆ.ಪಿ.ಸಿ.ಸಿ. ನಿರ್ದೇಶ ನದಂತೆ ಪೈವಳಿಕೆ ಗ್ರಾಮ ಕಚೇರಿಯ ಮುಂದೆ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಧರಣಿ ಮುಷ್ಕರ ನಡೆಸಲಾಯಿತು. ಮಂಡಲ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ ಉದ್ಘಾಟಿಸಿದರು. ಬ್ಲೋಕ್ ಕಾರ್ಯದರ್ಶಿ ರಾಘವೇಂದ್ರ ಭಟ್, ಮಂಡಲ ಪದಾಧಿಕಾರಿಗಳಾದ ಚನಿಯಪ್ಪ, ಸುಬ್ರಾಯ ಸಾಯ, ಅಬ್ದುಲ್ಲ ಹಾಜಿ, ಗಂಗಾಧರ ನಾಯ್ಕ್, ನೌಶಾದ್ ಕಯ್ಯಾರು, ನೇತೃತ್ವ ನೀಡಿದರು. ಶಾಜಿ ಎನ್ .ಸಿ. ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.

ಮಂಜೇಶ್ವರ ಮಂಡಲ ಸಮಿತಿ ಆಶ್ರಯದಲ್ಲಿ ಹೊಸಬೆಟ್ಟು ಗ್ರಾಮ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನು ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹ ಮ್ಮದ್ ಡಿಎಂಕೆ ಉದ್ಘಾಟಿಸಿದರು. ಮಂಡಲ ಸಮಿತಿ ಅಧ್ಯಕ್ಷ ಹನೀಫ್ ಪಡಿಞಾರ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೃಷ್ಣನ್ ಅಡ್ಕ ತ್ತೊಟ್ಟಿ, ಇಬ್ರಾಹಿಂ, ಮನ್ಸೂರ್, ಯೋಗೇಶ್, ರಂಜಿತ್, ಓಂಕೃಷ್ಣ, ಯು. ಅಬ್ದುಲ್ ರಹ್ಮಾನ್, ಶಾಫಿ, ನಾಗೇಶ್ ಮಂಜೇಶ್ವರ ಭಾಗ ವಹಿಸಿದರು.

ವರ್ಕಾಡಿ ಪಂಚಾಯತ್ ಗ್ರಾಮ ಕಚೇರಿ ಮುಂಭಾಗದಲ್ಲಿ ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯ ದಲ್ಲಿ ನಡೆದ ಪ್ರತಿಭಟನೆಯನ್ನು ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಉಮ್ಮರ್ ಬೋರ್ಕಳ ಉದ್ಘಾಟಿಸಿದರು. ಪುರುಷೋತ್ತಮ ಅರಿಬೈಲು ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಮುಹಮ್ಮದ್ ಮಜಾಲ್, ಖಲೀಲ್ ಬಜಾಲ್, ಗಣೇಶ್ ಪಾವೂರು, ಶಾಂತಾ ಆರ್. ನಾಯ್ಕ್, ವಸಂತ್‌ರಾಜ್ ಶೆಟ್ಟಿ ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page