ರಾತ್ರಿ ವೇಳೆ ಮಹಿಳೆಯರಿಗೆ ಸಂದೇಶ: ಪ್ರಶ್ನಿಸಿದ ಯುವಕನಿಗೆ ಇರಿದು ಗಂಭೀರ ಗಾಯ
ಕಾಸರಗೋಡು: ರಾತ್ರಿ ಸಮಯಗಳಲ್ಲಿ ಮಹಿಳೆಯರಿಗೆ ಸಂದೇಶ ಕಳುಹಿಸುವುದರ ಬಗ್ಗೆ ಪ್ರಶ್ನಿಸಿದ ದ್ವೇಷದಿಂದ ಯುವಕನನ್ನು ಇರಿದು ಕೊಲ್ಲಲು ಯತ್ನಿಸಲಾಗಿದೆ. ನೀಲೇಶ್ವರ ಮಡಿಕೈ ಪುದುಕೈ ಆಲಿಂಗೀಳಿನ ಮುಹಮ್ಮದ್ ಮುಸಾಮಿಲ್ (೨೪)ರಿಗೆ ಇರಿಯಲಾಗಿದೆ. ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅಬ್ದುಲ್ ಹಾರಿಸ್ (27) ಎಂಬಾತನ ವಿರುದ್ಧ ನೀಲೇಶ್ವರ ಪೊಲೀಸರು ನರಹತ್ಯಾ ಯತ್ನ ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ ಮಡಿಕೈ ದಿವ್ಯಂಪಾರೆಯಲ್ಲಿ ಘಟನೆ ನಡೆದಿದೆ. ಮಹಿಳೆಯರಿಗೆ ರಾತ್ರಿ ವೇಳೆಗಳಲ್ಲಿ ಸಂದೇಶ ಕಳುಹಿಸುತ್ತಿದ್ದುದನ್ನು ಮುಹಮ್ಮದ್ ಮುಸಾಮಿಲ್ ಈ ಮೊ ದಲು ಪ್ರಶ್ನಿಸಿದ್ದನು. ಇದರ ದ್ವೇಷ ದಿಂದಾ ಗಿರಬೇಕು ನಿನ್ನೆ ಕೊಲೆ ಯತ್ನ ನಡೆಸಿರು ವುದೆಂದು ಪೊಲೀಸರು ತಿಳಿಸಿದ್ದು, ಆ ರೋಪಿಗಾಗಿ ಹುಡುಕಾಟ ಆರಂಭಿಸಲಾಗಿದೆ.