ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಗ್ರಾಲ್ ಸೇತುವೆ ಮುರಿದು ತ್ರಿಪಥವಾಗಿ ನಿರ್ಮಿಸಬೇಕೆಂಬ ಬೇಡಿಕೆ ತೀವ್ರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚೆಂಗಳ-ತಲಪ್ಪಾಡಿ ರೀಚ್‌ನಲ್ಲಿ ಮೊಗ್ರಾಲ್ ಸೇತುವೆ ಪುನರ್ ನಿರ್ಮಿಸದೆ ಹೆದ್ದಾರಿ ನಿರ್ಮಾಣ ಪೂರ್ತಿಗೊಳಿಸಲಿರುವ ಕ್ರಮದಿಂದ ಭವಿಷ್ಯದಲ್ಲಿ ಭಾರೀ ದುರಂತಕ್ಕೆ ಎಡೆಮಾಡಿಕೊಡಲಿ ದೆಯೆಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ರೀಚ್‌ನಲ್ಲಿ ಕಾಸರಗೋಡಿನಿಂದ ತಲಪಾಡಿ ಭಾಗಕ್ಕೆ ಸ್ಲೀಪ್ ರೋಡ್ ಕಳದರೆ ಅಲ್ಲಿಂದ ಮೊಗ್ರಾಲ್ ಸೇತುವೆ ಮೂಲಕ ತೆರಳಲು ಸರ್ವೀಸ್ ರಸ್ತೆ ಅಥವಾ ಕಾಲುದಾರಿ ಇಲ್ಲದಿರುವುದು ಭಯ ಹುಟ್ಟಿಸುತ್ತಿದೆಯೆಂದು ನಾಗರಿಕರು ಹೇಳುತ್ತಿದ್ದಾರೆ. ಈ ಸ್ಥಳದಲ್ಲಿ ವೈಜ್ಞಾನಿಕ ರೀತಿಯ ಚರಂಡಿ ಇಲ್ಲದಿರುವುದು ಭಾರೀ ಸಮಸ್ಯೆಗೆ ಕಾರಣವಾಗಲಿದೆ.  ಮಾತ್ರವಲ್ಲ ಇದರಿಂದ ಇಲ್ಲಿ ಇತ್ತೀಚೆಗೆ ಶಿರೂರ್‌ನಲ್ಲಿ  ಸಂಭವಿಸಿದ ಲಾರಿ ಅಪಘಾತಕ್ಕೆ ಸಮಾನವಾದ ದುರಂತ ಇಲ್ಲೂ ಸಂಭವಿಸಲು ಸಾಧ್ಯತೆಯಿದೆಯೆಂದೂ ನಾಗರಿಕರು ತಿಳಿಸುತ್ತಿದ್ದಾರೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಗಡಿ ಪ್ರದೇಶವಾದ ಮೊಗ್ರಾಲ್ ಸೇತುವೆಯನ್ನು ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಪುನರ್ ನಿರ್ಮಿಸದಿರುವುದರಿಂದ ಇಲ್ಲಿಗೆ ತಲುಪುವಾಗ ತ್ರಿಪಥ ಹೆದ್ದಾರಿ ದ್ವಿಪಥವಾಗಿ ಬದಲಾಗಿದೆ. ಜಿಲ್ಲೆ ಮಾತ್ರವಲ್ಲದೆ ಕಣ್ಣೂರು  ಸಹಿತ ವಿವಿಧ ಜಿಲ್ಲೆಗಳಿಂದಲೂ ಹಲವಾರು ಅಗತ್ಯಗಳಿಗಾಗಿ ಮಂಗಳೂರಿಗೆ  ಹಲವಾರು ವಾಹನಗಳು ಹಾದು ಹೋಗುವ ವೇಳೆ ಈ ಸೇತುವೆ ಸಮೀಪಕ್ಕೆ ತಲುಪುವಾಗ ಹೆದ್ದಾರಿ ದ್ವಿಪಥವಾಗಿ  ಬದಲಾದುದರಿಂದ ವೇಗದಲ್ಲಿ ಬರುವ ವಾಹನಗಳು ಪರಸ್ಪರ ಢಿಕ್ಕಿ ಹೊಡೆಯುವ ಸಾಧ್ಯತೆಯೂ ಇದೆ.

ಕರ್ನಾಟಕದಲ್ಲಿ ಇದೇ ರೀತಿಯ ಕಾಮಗಾರಿಯಿಂದಾಗಿ ಭಾರೀ ಅಪಘಾತಗಳು ಸಂಭವಿಸಿದೆಯೆಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ. ಶಿಕ್ಷಣ, ವ್ಯಾಪಾರ, ಆಸ್ಪತ್ರೆ ಸಹಿತ ವಿವಿಧ ಅಗತ್ಯಗಳಿಗಾಗಿ ಸಾವಿರಾರು ವಾಹನಗಳು ಮಂಗಳೂರು ಭಾಗಕ್ಕೆ ಸಂಚರಿಸುವ ರಸ್ತೆ ಇದಾಗಿರುವುದರಿಂ ದಾಗಿ ನಿರ್ಮಾಣ ಕಾಮಗಾರಿ ವೇಳೆ ಭಾರೀ ಜಾಗ್ರತೆ ಪಾಲಿಸಬೇಕಾಗಿದೆ. ಈ ಸೇತುವೆಯ ಸ್ಥಿತಿ ಬಗ್ಗೆ ಆತಂಕ ಸೃಷ್ಟಿಯಾಗಿರುವುದಾಗಿ ನಾಗರಿಕರು ಹೇಳುತ್ತಿದ್ದಾರೆ.

ಹಳೆಯ ಮೊಗ್ರಾಲ್ ಸೇತುವೆ ಮುರಿದು ತ್ರಿಪಥವಾಗಿ ಪುನರ್ ನಿರ್ಮಿಸಿ,  ಸರ್ವೀಸ್ ರಸ್ತೆ ನಿರ್ಮಿಸಿದರೆ ಮಾತ್ರವೇ ಸಮಸ್ಯೆಗೆ ಪರಿಹಾರವಾಗಲಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಮೊಗ್ರಾಲ್ ದೇಶೀಯ ವೇದಿ ಅಧ್ಯಕ್ಷ ಟಿ.ಕೆ. ಮೂಸ ಅನ್ವರ್, ಪ್ರಧಾನ  ಕಾರ್ಯದರ್ಶಿ ಎಂ.ಎ. ಮೂಸ  ಎಂಬಿವರು ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page