ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡ ಪತ್ತೆ
ಕಾಸರಗೋಡು: ಚೆರ್ಕಳ-ತೆಕ್ಕಿಲ್ ಚಟ್ಟಂಚಾಲ್ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಆಳದ ಹೊಂಡವೊಂದು ಪತ್ತೆಯಾ ಗಿದೆ. ನಿನ್ನೆ ಇಲ್ಲಿ ಸೇತುವೆ ನಿರ್ಮಾ ಣಕ್ಕಾಗಿ ಹೊಂಡ ತೋಡುತ್ತಿದ್ದ ವೇಳೆ ನಡು ರಸ್ತೆಯಲ್ಲೇ ಬೃಹತ್ ಹೊಂಡ ಕಂಡುಬಂದಿದೆ. ಕೂಡಲೇ ಸಂಭಾವ್ಯ ಅನಾಹುತ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಮಿಕರು ಕಾಂಕ್ರೀಟ್ ನಡೆಸುವ ಮೂಲಕ ಹೊಂಡವನ್ನು ಮುಚ್ಚಿದ್ದಾರೆ. ಇನ್ನೊಂ ದೆಡೆ ಚೆರ್ವತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಗುಡ್ಡೆ ಜರಿದು ಬಿದ್ದಿದೆ.