ರಾಷ್ಟ್ರೀಯ ಹೆದ್ದಾರಿ: ಕುಂಬಳೆ ಸೇತುವೆ ವಾಹನ ಸಂಚಾರಕ್ಕೆ ಮುಕ್ತ
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಮೊದಲ ರೀಚ್ಆಗಿರುವ ತಲಪ್ಪಾಡಿ-ಚೆಂಗಳ ರಸ್ತೆಯಲ್ಲಿರುವ್ಲ ಕುಂಬಳೆ ಸೇತುವೆಯನ್ನು ಇಂದು ವಾಹನ ಸಂಚಾರಕ್ಕಾಗಿ ತೆರೆದುಕೊಡ ಲಾಯಿತು. ಇದರಿಂದ ಎರಡೂ ಭಾಗಗಳಿಗೆ ವಾಹನಗಳಿಗೆ ಸುಗಮವಾಗಿ ಸಂಚರಿಸಲು ಸೌಕರ್ಯ ಉಂಟಾಗಿದೆ. ಈ ಸೇತುವೆ ಸಮೀಪವಿರುವ ಹಳೆ ಸೇತುವೆಯನ್ನು ಮುರಿದು ತೆಗೆದು ದ್ವಿಪಥ ರಸ್ತೆಗೆ ಸೌಕರ್ಯವಾಗುವ ರೀತಿಯಲ್ಲಿ ಮತ್ತೊಂದು ಸೇತುವೆ ಯನ್ನು ನಿರ್ಮಿಸಲು ಆ ಮೂಲಕ ದ ವಾಹನ ಸಂಚಾರಕ್ಕೆ ಹೊಸ ಸೇತುವೆ ಮೂಲಕ ನಡೆಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ ತಲಪ್ಪಾಡಿ-ಚೆಂಗಳ ಒಂದನೇ ರೀಚ್ ನಲ್ಲಿ ಏಳು ಸೇತುವೆಗಳಿವೆ. ಮಂಜೇಶ್ವರ-ಹೊಸಬೆಟ್ಟು, ಮಂಜೇಶ್ವರ, ಮಂಜೇಶ್ವರ ಚೆಕ್ಪೋಸ್ಟ್, ಕುಕ್ಕಾರು, ಶಿರಿಯ, ಕುಂಬಳೆ, ಮೊಗ್ರಾಲ್ ಎಂಬಿಡೆಗಳಲ್ಲಾಗಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ನಿರ್ಮಾಣ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿದೆ. ಹಲವುಕೊನೆಯ ಹಂತದಲ್ಲಿವೆ. ಈ ಭಾಗಗಳ ಷಷ್ಪಥ ಹೆದ್ದಾರಿಯು ಅಂತಿಮ ಹಂತಕ್ಕೆ ತಲುಪಿದೆ. ಪ್ರಧಾನ ಪೇಟೆಗಳಲ್ಲಿ ಇನ್ನು ಕಾಮಗಾರಿ ಪೂರ್ತಿಗೊಳ್ಳಲು ಬಾಕಿಯಿದೆ. ಕಾಸರಗೋಡಿನಲ್ಲಿ ಒಂದೂವರೆ ಕಿಲೋಮೀಟರ್ನಷ್ಟಿರುವ ಫ್ಲೈ ಓವರ್ ನಿರ್ಮಾಣ ಅಂತಿಮ ಹಂತದಲ್ಲಿದೆ. ನಿರ್ಮಾಣ ಚಟುವಟಿಕೆ ತ್ವರಿತಗತಿಯಲ್ಲಿ ಆರಂಭಿಸಿರುವಾಗಲೇ ಸಾರಿಗೆ ಅಡಚಣೆ ತೀವ್ರಗೊಂಡಿರುವುದಾಗಿ ಆರೋಪಗಳು ಕೇಳಿಬಂದಿವೆ.