ರಾಷ್ಟ್ರೀಯ ಹೆದ್ದಾರಿ: ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಕೇಂದ್ರ-ರಾಜ್ಯ ಸರಕಾರಗಳ ನಿರ್ಧಾರ ಬರುವವರೆಗೆ ನಿಲುಗಡೆ; ಸಂಸದ ಇಂದು ದೆಹಲಿಗೆ: ಶಾಸಕರಿಂದ ಈವಾರ ಮುಖ್ಯಮಂತ್ರಿ ಭೇಟಿ

ಕಾಸರಗೋಡು:  ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ನಿರ್ಮಿಸಲು ಸಿದ್ಧತೆ ನಡೆಸಿದ್ದ ಟೋಲ್ ಬೂತ್‌ನ ನಿರ್ಮಾಣ ಕೇಂದ್ರ- ರಾಜ್ಯ ಸರಕಾg ಗಳು ಕೈಗೊಳ್ಳುವ ನಿರ್ಧಾರಕ್ಕೆ ಅನುಸರಿಸಿ ಜ್ಯಾರಿಗೊಳಿಸಲು ಜಿಲ್ಲಾಧಿಕಾರಿ, ಜನ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮಧ್ಯೆ ನಡೆದ ಚರ್ಚೆಯಲ್ಲಿ ನಿರ್ಧರಿಸಲಾಯಿತು. ಸರಕಾರಗಳು ನಿರ್ಧಾರ ಕೈಗೊಳ್ಳುವವರೆಗೆ ಟೋಲ್ ಬೂತ್‌ನ ನಿರ್ಮಾಣ ನಿಲ್ಲಿಸಲಾಗು ವುದು. ಜಿಲ್ಲಾಧಿಕಾರಿ ಕೆ. ಇಂಭಶೇ ಖರ್‌ರ ಅಧ್ಯಕ್ಷತೆಯಲ್ಲಿ ಕಲೆಕ್ಟರೇ ಟ್‌ನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಎಕೆಎಂ ಅಶ್ರಫ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ರಾಷ್ಟ್ರೀಯ ಹೆದ್ದಾರಿ  ಅಥಾರಿಟಿ ಪ್ರೊಜೆಕ್ಟ್ ಡೈರೆಕ್ಟರ್ ಉಮೇಶ ಕೆ ಭಾಗವಹಿಸಿದರು.  ಟೋಲ್ ಗೇಟ್ ಸಮಸ್ಯೆ ಕುರಿತು ರಾಜ್ಯ ಸರಕಾರದೊಂದಿಗೆ ಚರ್ಚೆ ನಡೆಸಲು ಜಿಲ್ಲೆಯ ಐವರು ಶಾಸಕರು ಈ ವಾರ ತಿರುವನಂತಪುರಕ್ಕೆ ತೆರಳು ವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಇಂದು ದೆಹಲಿಗೆ ತೆರಳುವರು. ಕೇಂದ್ರ ಲೋಕೋಪ ಯೋಗಿ ಸಚಿವ ನಿತಿನ್ ಗಡ್ಕರಿಯೊಂ ದಿಗೆ ಅವರು ಚರ್ಚೆ ನಡೆಸುವರು. ಎರಡೂ ಕಡೆಗಳಿಂದ ಉಂಟಾಗುವ ನಿರ್ಧಾರದ ಕುರಿತು ಜಿಲ್ಲಾ ಅಧಿಕಾರಿಗಳು ಹಾಗೂ ಜನರೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಯಿತು.  ಅದುವರೆಗೆ ಟೋಲ್ ಬೂತ್‌ನ ನಿರ್ಮಾಣ ನಿಲುಗಡೆಗೊಳಿಸಲು ಸಭೆ ನಿರ್ಧರಿಸಿದೆ.

You cannot copy contents of this page