‘ರಾ’ ತುಳು ಸಾಕ್ಷ್ಯಚಿತ್ರಕ್ಕೆ ಅಸೀಫ್ ಅವಾರ್ಡ್

ಕುಂಬಳೆ: ಕೊಲ್ಕತ್ತಾದ ಅಮೆದೀರ್ ಇಂಟರ್ನೇಶನಲ್ ಶಾರ್ಟ್ ಫಿಲ್ಮ್ಸ್ ಫೆಸ್ಟಿವಲ್ (ಅಸೀಫ್)ನಲ್ಲಿ ಕಾಸರಗೋಡಿನ ‘ಸುಖದ’ ಕ್ರಿಯೇಶನ್ಸ್‌ನ ಕಣ್ಯಾರ ಫಿಲ್ಮ್ ನಿರ್ಮಿಸಿದ ‘ರಾ’ ತುಳು ಸಾಕ್ಷ್ಯಚಿತ್ರ ಅತ್ಯುತ್ತಮ ಸ್ಕ್ರೀನ್ ಪ್ಲೇಚಿತ್ರಕ್ಕಿರುವ ಬಹುಮಾನ ಗೆದ್ದುಕೊಂಡಿದೆ.

ಯುವ ನಿರ್ದೇಶಕ ಗೌತಮ್ ಶೆಟ್ಟಿ ಪುತ್ತಿಗೆ ನಿರ್ದೇಶಿಸಿರುವ ಈ ಸಾಕ್ಷ್ಯ ಚಿತ್ರ ಕಳೆದ ಫೆ. ೧೮ರಂದು ನೀರ್ಚಾಲಿನಲ್ಲಿ ಬಿಡುಗಡೆಗೊಂಡಿತ್ತು. ಶಿವರಾಜ್ ಕುಲಾಲ್, ರಕ್ಷಣ್, ಅಭಿಷೇಕ್, ಚಿತ್ತರಂಜನ್, ಅಶ್ವಥ್ ಸಹ ನಿರ್ದೇಶನ ನೀಡಿದ್ದು, ಮನೀಶ್ ವಿದ್ಯಾಗಿರಿ ಸಂಗೀತ ನಿರ್ದೇಶನ ನೀಡಿದ್ದಾರೆ. ಅವಿನೇಶ್ ಶೆಟ್ಟಿ ಹಾಡಿರುವ ಚಿತ್ರಕ್ಕೆ ಶಿವರಾಜ್ ಕುಲಾಲ್ ಸಂಗೀತ ನೀಡಿದ್ದಾರೆ. ಗೌತಮ್ ಶೆಟ್ಟಿ, ಪೃಥ್ವಿನ್ ಕೃಷ್ಣ ಪುದುಕೋಳಿ, ಸಂದೀಪ್, ಹವ್ಯಾಸ್, ಪ್ರದೀಪ್, ಕಿರಣ್ ಕಲಾಂಜಲಿ ನಟಿಸಿದ್ದಾರೆ. ಶಿವದಾಸ್ ಕಾಮತ್ ಚಿತ್ರಸಂಪಾದನೆ ಮಾಡಿದ್ದು, ದೀಕ್ಷಿತ್ ಕಾಸರಗೋಡು ಸಹಕಾರ ನೀಡಿ

ದ್ದಾರೆ.

ಕೊಲ್ಕತ್ತಾದ ರಬೀಂದ್ರ ಸರಣಿ ಗಣೇಶ ಟಾಕೀಸಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಸೀಫ್‌ನ ಆಕಾಶ್ ಬ್ಯಾನರ್ಜಿ ಪ್ರಶಸ್ತಿ ಪತ್ರ, ಫಲಕಗಳನ್ನು ನಿರ್ದೇಶಕ ಗೌತಮ್ ಶೆಟ್ಟಿ ಪುತ್ತಿಗೆ ಹಾಗೂ ಮನೀಶ್ ವಿದ್ಯಾಗಿರಿ ಅವರಿಗೆ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *

You cannot copy content of this page