ರೇಶನ್ ವ್ಯಾಪಾರಿಗಳಿಂದ ತಾಲೂಕು ಸಪ್ಲೈ ಕಚೇರಿ ಧರಣಿ
ಕಾಸರಗೋಡು: ಆರು ವರ್ಷಗಳ ಹಿಂದೆ ಜ್ಯಾರಿಗೊಳಿಸಿದ ವೇತನ ಪ್ಯಾಕೇಜ್ ಪರಿಷ್ಕರಿಸಬೇಕು, ಸೆಪ್ಟಂಬರ್, ಅಕ್ಟೋಬರ್ ತಿಂಗಳ ಕಮಿಶನ್ ಮೊತ್ತ ನೀಡಬೇಕು, ಓಣಂ ಹಬ್ಬದ ವೇಳೆ ಸರಕಾರ ಘೋಷಿಸಿದ 1000 ರೂ. ಉತ್ಸವ ಭತ್ತೆ ವಿತರಿಸಬೇಕು ಮೊದಲಾದ ಹಲವು ಬೇಡಿಕೆಗಳನ್ನು ಮುಂದಿಟ್ಟು ರೇಶನ್ ಡೀಲರ್ಸ್ ಜಂಟಿ ಕೋ-ಆರ್ಡಿನೇ ಶನ್ ಸಮಿತಿಯ ಆಶ್ರಯದಲ್ಲಿ ತಾಲೂಕು ಸಪ್ಲೈ ಕಚೇರಿ ಮುಂಭಾಗ ಸಾಮೂಹಿಕ ಧರಣಿ ನಡೆಸಲಾಯಿತು. ಕಾಸರಗೋಡಿನಲ್ಲಿ ನಡೆದ ಧರಣಿಯನ್ನು ಎಕೆಆರ್‌ಆರ್‌ಡಿಎ ಜಿಲ್ಲಾ ಅಧ್ಯಕ್ಷ ಶಂಕರ್ ಬೆಳ್ಳಿಗೆ ಉದ್ಘಾಟಿಸಿದರು. ತಾಲೂಕು ಸಮಿತಿ ಅಧ್ಯಕ್ಷ ಸತೀಶನ್ ಇಡವೇಲಿ ಅಧಕ್ಷತೆ ವಹಿಸಿದರ. ಜಂಟಿ ಮುಷರ ಸಮಿತಿ ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಬಲ್ಲಾಳ್ ಪ್ರಧಾನ ಭಾಷಣ ಮಾಡಿದರು. ಟಿ. ವಿಜಯನ್ ನಾಯರ್, ಕೆ. ಪ್ರದೀಪ್ ಕುಮಾರ್, ಸುಧಾಮ ಗೋಸಾಡ, ವಸಂತ ಶೆಣೈ, ನಾರಾಯಣನ್ ಕೋಳಿಯಡ್ಕಂ, ಇ.ಕೆ. ಅಬ್ದುಲ್ಲ, ಶೋಭನಾ ವಿಜಯನ್, ಪಿ. ಅಬ್ದುಲ್ ಗಫೂರ್, ಪಿ. ಲೋಹಿತಾಕ್ಷನ್ ಮಾತನಾಡಿದರು.
ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ ಮುಂಭಾಗ ನಡೆದ ಧರಣಿಯನ್ನು ಸಂಘಟನೆಯ ರಾಜ್ಯ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರಹಿಮಾನ್ ಉದ್ಘಾಟಿಸಿದರ. ಶರಣ್ ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಕೆ. ಶಂಕರ ರಾವ್, ಪಿ.ಬಿ. ಅಬೂಬ ಕರ್, ಕಂಚಿಲ ಮುಹಮ್ಮದ್, ಸುಭಾಕರ, ಸೋಮಪ್ಪ ಮಾತನಾಡಿದರು.