ರೈಲಿನಲ್ಲಿ ನಷ್ಟಗೊಂಡ ಮಹಿಳಾ ಪೊಲೀಸ್ ಸಿಬ್ಬಂದಿಯ ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಷ್ಟಹೊಂ ದಿದ ಮಹಿಳಾ ಪೊಲೀಸ್ ಸಿಬ್ಬಂದಿ ಯ ಸುಮಾರು ಎರಡೂವರೆ ಪವನ್ ಚಿನ್ನದ ಸರ ವಿದ್ಯಾರ್ಥಿನಿಯೋರ್ವೆ ಪತ್ತೆಹಚ್ಚಿ ಅದನ್ನು ವಾರೀಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ.

ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ  ನಿನ್ನೆ ಕುಂಬಳೆಗೆ ಬರುತ್ತಿದ್ದ  ಕುಂಬಳೆ  ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯೋರ್ವೆಯ ಚಿನ್ನದ ಸರ ರೈಲಿನೊಳಗೆ ನಷ್ಟಗೊಂಡಿತ್ತು. ಬಳಿಕ ಅದು ಅವರ ಗಮನಕ್ಕೆ ಬಂದಾಗ ತಕ್ಷಣ ಕಾಸರಗೋಡು ರೈಲ್ವೇ ಪೊಲೀ ಸರಿಗೆ ಕರೆದು ಮಾಹಿತಿ ನೀಡಿದ್ದಾರೆ. ಆಗ ತಡಮಾಡದ ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ಸನಿಲ್ ಕುಮಾರ್ ರೈಲಿನ ಟಿಟಿಆರ್‌ಗೆ ಕರೆದು ರೈಲಿನೊಳಗೆ ಚಿನ್ನದ ಸರ ಲಭಿಸಿದೆಯೇ ಎಂದು ಕೇಳಿ ತಿಳಿಸುವಂತೆ ಆಗ್ರಹಿಸಿದರು. ಅದರಂತೆ ಟಿಟಿಆರ್  ಆ ವಿಷಯವನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಪ್ರಯಾಣಿಸಿದ್ದ ರೈಲು ಬೋಗಿಯ ಪ್ರಯಾಣಿಕರಿಗೆ  ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗ ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಕರುನಾಗಪಳ್ಳಿ ನಿವಾಸಿ ಹಾಗೂ ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಆ ಸರ ತನಗೆ ಬಿದ್ದು ಸಿಕ್ಕಿರುವುದಾಗಿ ತಿಳಿಸಿದ್ದಾಳೆ. ನಂತರ ಸರವನ್ನು ಆಕೆ ಅದರ ವಾರೀಸುದಾರರಾದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾಳೆ.

You cannot copy contents of this page