ರೈಲಿನಲ್ಲಿ ಪ್ರಯಾಣಿಕನ ಬ್ಯಾಗ್ ಕಳವು: ಕಳ್ಳರು ದೋಚಿದ್ದು ಭಾರೀ ಮೌಲ್ಯದ ಸಾಮಗ್ರಿಗಳು
ಕಾಸರಗೋಡು: ರೈಲಿನಲ್ಲಿ ಪ್ರಯಾಣಿ ಕನ ಭಾರೀ ಬೆಲೆ ಬಾಳುವ ಸಾಮಗ್ರಿಗಳು ಒಳಗೊಂಡಿದ್ದ ಬ್ಯಾಗನ್ನು ಕಳ್ಳರು ಕದ್ದ ಘಟನೆ ನಡೆದಿದೆ. ಚೆನ್ನೈ- ಮಂಗಳೂರು ಎಕ್ಸ್ಪ್ರೆಸ್ ರೈಲುಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ನಿವಾಸಿ ಜೆರಿನ್ ಥೋಮಸ್ (27) ಎಂಬವರ ಬ್ಯಾಗ್ ಕಳವಿಗೀಡಾಗಿದೆ. ಈ ರೈಲು ಚೆನ್ನೈಯಿಂದ ಮಂಗಳೂರಿಗೆ ಹೋಗುವ ಮಧ್ಯೆ ಹೊಸದುರ್ಗ ತಲುಪಿದಾಗ ಕಳವು ನಡೆದಿದೆ. ಬ್ಯಾಗ್ನಲ್ಲಿ 20000 ರೂ. ಚಾಲೊ ಕ್ರಿಸ್ಟಲ್ ಬ್ರಾಸ್ಲೈಟ್, 12,000 ರೂ. ಮೌಲ್ಯದ ಕನ್ನಡಕ 3000 ರೂ. ಬೆಲೆಯ ವಯರ್ಲೆಸ್ ಚಾರ್ಜರ್, 33,315 ಮೌಲ್ಯದ ವಾಲೆಟ್, 16,445 ರೂ. ಮೌಲ್ಯದ ಇಯರ್ ಫೋನ್ ಇತ್ಯಾದಿಗಳು ಸೇರಿ ಒಟ್ಟು 83760ರೂ.ಗಳ ಸಾಮಗ್ರಿಗಳಿದ್ದವು. ಮಾತ್ರವಲ್ಲ ಯು.ಎ.ಇ ಡ್ರೈವಿಂಗ್ ಲೈಸನ್ಸ್, ಎಟಿಎಂ ಕಾರ್ಡ್ಗಳೂ ಅದರಲ್ಲಿ ಒಳಗೊಂಡಿದ್ದವೆAದು ಜೆರಿನ್ ಥೋಮಸ್ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರೈಲು ಹೊಸದುರ್ಗಕ್ಕೆ ತಲುಪಿದಾಗ ಅಲ್ಲಿ ಇಳಿದ ವ್ಯಕ್ತಿಯೋರ್ವ ಕಳವು ನಡೆಸಿರಬಹುದೆಂಬ ಶಂಕೆಯನ್ನು ದೂರಿನಲ್ಲಿ ಜೆರಿನ್ ಥೋಮಸ್ ವ್ಯಕ್ತಪಡಿಸಿದ್ದಾರೆ.