ರೈಲು ಢಿಕ್ಕಿ ಹೊಡೆದು ಅನಿವಾಸಿ ಕೇರಳೀಯ ಸಾವು

ಕಾಸರಗೋಡು: ರೈಲುಗಾಡಿ ಢಿಕ್ಕಿ ಹೊಡೆದು ಅನಿವಾಸಿ ಕೇರಳೀಯ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಹೊಸದುರ್ಗ ಕೊವ್ವಲ್‌ಪಳ್ಳಿಯ ಕೆ.ವಿ. ಸುನಿಲ್ ಕುಮಾರ್ (50) ಸಾವನ್ನಪ್ಪಿದ ವ್ಯಕ್ತಿ. ವಿದೇಶದಲ್ಲಿ ದುಡಿಯುತ್ತಿದ್ದ ಇವರು ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಹೊಸದುರ್ಗ ಕುಶಾಲನಗರದ ರೈಲು ಹಳಿ ಸಮೀಪ ಇವರು ನಿನ್ನೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೊಸದುರ್ಗ ಪೊಲೀಸರು ಈ ಬಗ್ಗೆ ತನಿಖ ಆರಂಭಿಸಿದ್ದಾರೆ. ಅಪ್ಪುಂಞಿ-ತಂಗಮಣಿ ದಂಪತಿ ಪುತ್ರನಾಗಿರುವ ಸುನಿಲ್ ಪತ್ನಿ ರಜನಿ, ಮಕ್ಕಳಾದ ಕೆ.ವಿ. ಪೂಜಾ, ಕೆ.ವಿ. ದೇವಿಕಾ, ಸಹೋದರ-ಸಹೋದರಿಯರಾದ ಕೆ.ವಿ. ಬಿಜು, ಕೆ.ವಿ. ಅಜಯನ್, ಕೆ.ವಿ. ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page