ರೈಲು ಪ್ರಯಾಣಿಕನ ಐ ಫೋನ್ ಕಳವು
ಕಾಸರಗೋಡು: ಪ್ರಯಾಣದ ಮಧ್ಯೆ ರೈಲು ಪ್ರಯಾಣಿಕರೋರ್ವರ ಐ-ಫೋನ್ ಕಳವುಗೈದ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಲಾಗಿದೆ. ಮಹಾರಾಷ್ಟ್ರ ಪುಣೆ ನಿವಾಸಿ ಕೇತನ ಸಂಜಯ್ ಕುಲಕರ್ಣಿ ಎಂಬವರ 75000 ರೂ. ಮೌಲ್ಯದ ಮೊಬೈಲ್ ಫೋನ್ ಕಳವುಗೈಯ್ಯಲಾಗಿದೆ. ಇವರು ತಿರುವನಂತಪುರದಿಂದ ಪೆರಾವಲ್‌ಗೆ ಹೋಗುವ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಕಾರವಾರಕ್ಕೆ ಹೋಗುತ್ತಿದ್ದರು. ರೈಲು ನಿನ್ನೆ ಮಧ್ಯಾಹ್ನ ಕಾಸರಗೋಡು ರೈಲು ನಿಲ್ದಾಣಕ್ಕೆ ಆಗಮಿಸಿ ಮಂಗಳೂರಿನತ್ತ ಪ್ರಯಾಣ ಮುಂದುವರಿಯುವು ದರೊಳಗಾಗಿ ರೈಲಿನೊಳಗಿನಿಂದಲೇ ಅವರ ಮೊಬೈಲ್ ಪೋನ್ ಯಾರೋ ಕದ್ದಿದ್ದಾರೆ. ಆ ಬಗ್ಗೆ ಕೇತನ್ ಸಂಜಯ್ ಕುಲಕರ್ಣಿ ನೀಡಿದ ದೂರಿನಂತೆ ಕಾಸರಗೋಡು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.