ಲೈಂಗಿಕ ಕಿರುಕುಳ ದೂರುಗಳನ್ನು ಹಿಂತೆಗೆದುಕೊಳ್ಳಲು ಮುಂದಾದ ನಟಿ : ನಟ ಮುಖೇಶ್, ಜಯಸೂರ್ಯ ಸೇರಿದಂತೆ ಹಲವರು ನಿರಾಳ
ಕೊಚ್ಚಿ: ಮಲೆಯಾಳ ಸಿನಿಮಾ ರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಶೋಷಣೆಗಳ ಕುರಿತಾಗಿ ಜಸ್ಟೀಸ್ ಹೇಮಾ ಕಮಿಟಿಯ ವರದಿ ಹೊರಬಂದ ಬೆನ್ನಲ್ಲೇ ಹಲವು ನಟರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಹೊರಿಸಿ ಸಲ್ಲಿಸಲ್ಪಟ್ಟು ಅದು ಇಡೀ ಮಲೆಯಾಳ ಚಿತ್ರರಂಗವನ್ನೇ ಅಲುಗಾಡಿಸಿದ ಬೆನ್ನಲ್ಲೇ ದೂರು ನೀಡಿದ ನಟಿಯೋರ್ವೆ ತಾನು ನೀಡಿದ ದೂರುಗಳನ್ನು ಹಿಂತೆಗೆದು ಕೊಳ್ಳುವುದಾಗಿ ತಿಳಿಸಿದ್ದಾಳ.
ಇದರಿಂದ ಮಲೆಯಾಳ ಸಿನಿಮಾ ನಟರಾದ ಶಾಸಕ ಎಂ. ಮುಖೇಶ್, ಜಯಸೂರ್ಯ ಸೇರಿದಂತೆ ಇತರ ಹಲವರ ವಿರುದ್ಧ ನೀಡಲಾದ ದೂರುಗಳನ್ನು ಹಿಂತೆಗೆದುಕೊಳ್ಳುವುದಾಗಿ ನಟಿ ಹೇಳಿದ್ದಾಳ. ಇದು ಮುಖೇಶ್, ಜಯಸೂರ್ಯ ಮೊದಲಾದ ನಟರನ್ನು ನಿರಾಳಗೊಳಿಸುವಂತೆ ಮಾಡಿದೆ. ತಾನು ನೀಡಿದ ದೂರಿನಂತೆ ದಾಖಲಿಸಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ತನಿಖಾ ತಂಡಕ್ಕೆ ಇ ಮೇಲ್ ಸಂದೇಶ ಕಳುಹಿಸುವುದಾಗಿ ನಟಿ ತಿಳಿಸಿದ್ದಾಳೆ. ದೂರು ಸಲ್ಲಿಸಿರುವ ನನಗೆ ಸರಕಾರದಿಂದ ಯಾವುದೇ ರೀತಿಯ ಬೆಂಬಲ ಲಭಿಸಿಲ್ಲ. ಮಾತ್ರವಲ್ಲ ತನ್ನ ವಿರುದ್ಧ ದಾಖಲಿಸಲಾಗಿರುವ ಪೋಕ್ಸೋ ಪ್ರಕರಣದ ಸತ್ಯಾವಸ್ಥೆ ಯನ್ನು ಹೊರತರಲು ಸರಕಾರ ತಯಾರಾಗುತ್ತಿಲ್ಲವೆಂದು ನಟಿ ಆರೋಪಿದ್ದಾಳ. ಕೇವಲ ಕೆಲವು ಮಾಧ್ಯಮಗಳು ಮಾತ್ರವೇ ನನ್ನನ್ನು ಈ ವಿಷಯದಲ್ಲಿ ಬೆಂಬಲಿಸಿದೆ ಯೆಂದೂ ನಟಿ ತಿಳಿಸಿದ್ದಾಳೆ.
ಕೇಸುಗಳನ್ನು ಹಿಂಪಡೆಯುವು ದಾಗಿ ನಟಿ ಹೇಳಿರುವ ಹಿನ್ನೆಲೆಯಲ್ಲಿ ನಟರಾದ ಮುಖೇಶ್, ಜಯಸೂ ರ್ಯ ಮಾತ್ರವಲ್ಲ ಮಣಿಯಾಂಪಿಳ್ಳೆ ರಾಜು, ಇಡವೇಳ ಬಾಬು ಎಂಬವರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನೂ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ.