ಲೌಡ್ ಸ್ಪೀಕರ್ ಉಪಯೋಗಿಸುವ ಆರಾಧನಾಲಯಗಳಿಗೆ ಪೊಲೀಸ್ ನೋಟೀಸು

ಕಾಸರಗೋಡು: ಜಿಲ್ಲೆಯಲ್ಲಿ ನಿಷೇಧಿತ ಲೌಡ್ ಸ್ಪೀಕರ್ ಬಳಸುತ್ತಿ ರುವ ಆರಾಧನಾಲಯಗಳು ಅದನ್ನು ಶೀಘ್ರ ತೆರವುಗೊಳಿಸುವಂತೆ ನಿರ್ದೇಶಿಸಿ ಪೊಲೀಸರು ನೋಟೀಸು ಜ್ಯಾರಿಗೊಳಿ ಸಿದ್ದಾರೆ. ಜಿಲ್ಲೆಯ ಹಲವು ಆರಾಧನಾ ಲಯಗಳ ಆಡಳಿತ ಸಮಿತಿಗಳಿಗೆ ಪೊಲೀಸರು ಈ ನೋಟೀಸು ಜ್ಯಾರಿಗೊಳಿಸಲಾಗಿದೆ. ನಿಷೇಧಿತ ಲೌಡ್ ಸ್ಪೀಕರ್‌ಗಳನ್ನು ಬಳಸಿ ಶಬ್ದ ಮಲಿನೀಕರಣಗೊಳಿ ಸಬಾರದೆಂದೂ ಅದನ್ನು ತೆರವುಗೊಳಿಸುವಂತೆ  ಹೈಕೋರ್ಟ್  ರಾಜ್ಯ ಸರಕಾರಕ್ಕೆ ಈ ಹಿಂದೆಯೇ ನಿರ್ದೇಶಿಸಿತ್ತು. ಆದರೆ ಅದನ್ನು ಪಾಲಿಸದೆ ಕಾನೂನು ವಿರುದ್ಧ ವಾಗಿ ಅಂತಹ ಲೌಡ್ ಸ್ಪೀಕರ್‌ಗಳನ್ನು ಜಿಲ್ಲೆಯ ಹಲವು ಆರಾಧನಾಲಯಗಳು ಈಗಲೂ ಬಳಸುತ್ತಿವೆ. ಆದ್ದರಿಂದ ಅಂತಹ ಆರಾಧನಾಲಯಗಳು ಈ  ನೋಟೀಸು ಲಭಿಸಿದಾಕ್ಷಣದಿಂದ ಅದನ್ನು ಕಳಚಿ ಹೊರತುಪಡಿಸ ಬೇಕೆಂದು ಪೊಲೀಸರು ಜ್ಯಾರಿಗೊಳಿಸಿದ ನೋಟೀಸಿನಲ್ಲಿ ಸ್ಪಷ್ಟಪಡಿಸಲಾಗಿದೆ.

ನಿಷೇಧಿತ ಲೌಡ್ ಸ್ಪೀಕರ್‌ಗಳನ್ನು ಹಲವು ಆರಾಧನಾಲಯಗಳಲ್ಲಿ ಈಗಲೂ ಬಳಸಿ ಆ ಮೂಲಕ ಶಬ್ದ ಮಲಿನೀಕರಣ ನಡೆಸುತ್ತಿರುವುದಾ ಗಿಯೂ ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿ ನೂರಾರು ದೂರುಗಳು ರಾಜ್ಯ ಗೃಹಖಾತೆಗೆ ಲಭಿಸಿದೆ. ಅದನ್ನು ಪರಿಶೀಲಿಸಿದ ಗೃಹಖಾತೆ, ನಿಷೇಧಿತ ಲೌಡ್ ಸ್ಪೀಕರ್‌ಗಳನ್ನು ಬಳಸುವ ಆರಾಧನಾಲಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶ ನೀಡಿದೆ.

RELATED NEWS

You cannot copy contents of this page