ವಂದೇ ಭಾರತ್ ರೈಲು ಢಿಕ್ಕಿ ಹೊಡೆದು ಯುವತಿ ಮೃತ್ಯು
ಕಾಸರಗೋಡು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿ ಢಿಕ್ಕಿ ಹೊಡೆದು ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ.
ನೀಲೇಶ್ವರ ಕಿಳಿಕ್ಕುಂಗರ ಮುಚ್ಚಿಲೋಟ್ ಸಮೀಪದ ಸುರೇಶನ್ ಮಾತಮಂಗಲ -ವಿದ್ಯಾ ದಂಪತಿ ಪುತ್ರಿ ನಂದನ (೨೧) ಸಾವನ್ನಪ್ಪಿದ ಯುವತಿ. ನಿನ್ನೆ ಮಧ್ಯಾಹ್ನ ನೀಲೇಶ್ವರ ರೈಲ್ವೇ ಗೇಟಿನ ಬಳಿ ಈಕೆ ರೈಲು ಗಾಡಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನೀಲೇಶ್ವರ ಪೊಲೀಸರು ತನಿಖೆ ನಡೆಸಿದರು. ಮೃತರು ಸಹೋದರ ವಿಷ್ಣು ಸೇರಿದಂತೆ ಹಲವು ಬಂಧು-ಮಿತ್ರರನ್ನು ಅಗಲಿದ್ದಾರೆ.