ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ಸಂಸದರ ಕಚೇರಿಗೆ ಮಾರ್ಚ್ ನಡೆಸುವೆವು -ಕೆ.ಸುರೇಂದ್ರನ್

ಕಾಸರಗೋಡು: ವಕ್ಫ್ ಮಂಡಳಿ ಮಂಡಿಸುತ್ತಿರುವ ಹಕ್ಕುವಾದಗಳ ವಿರುದ್ಧ ನಡೆಸಲಾಗುತ್ತಿರುವ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದೆಂದು ಬಿಜೆಪಿ ರಾಜ್ಯ ಘಟಕ ಕೆ. ಸುರೇಂದ್ರನ್ ಹೇಳಿದ್ದಾರೆ.

ಕೇರಳದಿಂದ ಲೋಕಸಭೆಗೆ ಆಯ್ಕೆಗೊಂಡ ಎಲ್ಲಾ ಸಂಸದರು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅನುಕೂಲಕರವಾಗಿ ಕೈ ಎತ್ತಬೇಕು. ಕೇರಳದ ಜನಸಾಮಾನ್ಯರ ಜತೆ ನಿಲ್ಲಬೇಕಾಗಿರುವ ಹೊಣೆಗಾರಿಕೆಯೂ ಕೇರಳದ ಸಂಸದರಿಗಿದೆ. ಅದಕ್ಕೆ ಅವರು ತಯಾರಾಗದಿದ್ದಲ್ಲಿ ಅವರ ಕಚೇರಿಗಳಿಗೆ ಬಿಜೆಪಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಕೊಚ್ಚಿಯಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಸುರೇಂದ್ರನ್ ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಗೆ ವಿರುದ್ಧ ಕೇರಳ ವಿಧಾನಸಭೆ ಅವಿರೋಧ ಅಂಗೀಕರಿಸಿದ  ರಾಜ್ಯ ಸರಕಾರ ಹಿಂಪಡೆಯಬೇಕು. ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಎಡರಂಗ ಮತ್ತು ಐಕ್ಯರಂಗ ಸಂಯುಕ್ತವಾಗಿ ತಳೆದಿರುವ ನಿಲುವು ಕೇರಳದಲ್ಲಿ ಪ್ರತಿಕೂಲ ಪರಿಣಾಮ ಬೀರಿದೆ.

ಆದ್ದರಿಂದ ಡಿಸೆಂಬರ್‌ನಲ್ಲಿ ಸೇರಲಿರುವ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯದಲ್ಲಿ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದೂ ಸುರೇಂದ್ರನ್ ಆಗ್ರಹಪಟ್ಟಿದ್ದಾರೆ.

ವಕ್ಫ್ ಮಂಡಳಿ ಎರ್ನಾಕುಳಂ ಜಿಲ್ಲೆಯ ಮುನಂಬಂ ಜಮೀನಿನ ಬಗ್ಗೆ ಮಂಡಿಸಿರುವ ಹಕ್ಕುವಾದ ಕೇವಲ ಆ ಗ್ರಾಮಕ್ಕೆ ಮಾತ್ರವಾಗಿ ಸೀಮಿತಗೊಳ್ಳುವುದಿಲ್ಲ. ಅದರ ಪರಿಣಾಮ ಇತರ ಪ್ರದೇಶಗಳ ಮೇಲೂ ಬೀರಲಿದೆ. ಯಾರನ್ನು ಬೇಕಾದರೂ ಒಕ್ಕಲೆಬ್ಬಿಸಬೇಕಾದ ಸ್ಥಿತಿ ಕೇರಳದಲ್ಲಿ ಇಂದು ಸಂಜಾತ ವಾಗಿದೆ. ಅದರ ವಿರುದ್ಧ ನಡೆಸಲಾಗು ತ್ತಿರುವ ಹೋರಾಟವನ್ನು ಬಿಜೆಪಿ ಇನ್ನಷ್ಟು ತೀವ್ರಗೊಳಿಸುವುದಾಗಿ ಯೂ ಕೆ.ಸುರೇಂದ್ರನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page