ವಯನಾಡಿನಲ್ಲಿ ಎಲ್ಡಿಎಫ್,ಯುಡಿಎಫ್ ಹರತಾಳ
ಕಲ್ಪೆಟ್ಟ: ವಯನಾಡು ಜಿಲ್ಲೆಯ ಮುಂಡಕೈ ಮತ್ತು ಚೂರಲ್ಮಲೆಯಲ್ಲಿ ಇತ್ತೀಚೆಗೆ ಉಂಟಾದ ಭೀಕರ ಭೂಕುಸಿತ ದುರಂತಕ್ಕೆ ಸಂಬಂಧಿಸಿ ಸಂತ್ರಸ್ತರಿಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ಜ್ಯಾರಿಗೊಳಿಸಬೇಕೆಂಬ ಬೇಡಿಕೆಯನ್ನು ಅಂಗೀಕರಿಸದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಆಡಳಿತ ಒಕ್ಕೂಟವಾದ ಎಡರಂಗ ಮತ್ತು ವಿಪಕ್ಷ ಯುಡಿಎಫ್ ನೀಡಿದ ಆಹ್ವಾನ ಪ್ರಕಾರ ವಯನಾಡಿನಲ್ಲಿ ಇಂದು ಹರತಾಳ ಆಚರಿಸಲಾಗುತ್ತಿದೆ. ಇಂದು ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡ ಹರತಾಳ ಸಂಜೆ ೬ ಗಂಟೆ ತನಕ ಮುಂದುವರಿಯಲಿದೆ. ಅಗತ್ಯದ ಸೇವೆಗಳನ್ನು ಹರತಾಳದಿಂದ ಹೊರತುಪಡಿಸಲಾಗಿದೆ. ಹರತಾಳ ಶಾಂತಿಯುತವಾಗಿ ಮುಂದುವರಿಯು ತ್ತಿದೆ. ಈತನಕ ಯಾವುದೇ ರೀತಿಯ ಅಹಿತಕರ ಘಟನೆ ವರದಿಯಾಗಿಲ್ಲ.