ವಯನಾಡಿನಲ್ಲಿ ಬೈಕ್‌ಗೆ ಜೀಪು ಢಿಕ್ಕಿ ಹೊಡೆದು ಗೃಹಿಣಿ ಸಾವಿಗೀಡಾದ ಪ್ರಕರಣ: ಕಾಸರಗೋಡಿನ ಐದು ಮಂದಿ ಸೆರೆ

ಕಾಸರಗೋಡು: ವಯನಾಡಿ ನಲ್ಲಿ ಬೈಕ್‌ಗೆ ಜೀಪು ಢಿಕ್ಕಿ ಹೊಡೆದು ಗೃಹಿಣಿ ಸಾವಿಗೀಡಾದ ಪ್ರಕರಣಕ್ಕೆ ಸಂ ಬಂಧಿಸಿ ಕಾಸರಗೋಡಿನ ಐದು ಮಂದಿ ಯನ್ನು  ಬಂಧಿಸಲಾಗಿದೆ. ಚೆಮ್ನಾಡ್ ಪೆರುಂಬಳದ ಅಖಿಲ್ (26), ಅರಮಂ ಗಾನ ಪುದಿಯ ವಳಪ್ಪ್ ವೀಡ್‌ನ  ಪ್ರಶಾಂತ್ (21), ಪೆರುಂಬಳ ವಯ ಲಾಂಕುಳಿಯ ನಿತಿ (20), ಪೆರುಂಬಳದ ನಿತಿನ್‌ನಾರಾ ಯಣನ್ (22) ಹಾಗೂ 17ರ ಹರೆಯದ ಇನ್ನೋರ್ವನನ್ನು ವಯನಾಡ್ ಮೇಪಾಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ.ಯು. ಜಯಪ್ರಕಾಶ್ ನೇತೃತ್ವದ  ಪೊಲೀಸರು ಬಂಧಿಸಿದ್ದಾರೆ.

ಜೂನ್ ೮ರಂದು ವಯನಾಡು ಮೇಪಾಡಿ ಕೊಕ್ಕತ್ತೋಡ್ ಎಂಬಲ್ಲಿ ಘಟನೆ ನಡೆದಿದೆ.  ಸೆರೆಗೀಡಾದ ಐದು ಮಂದಿ  ಬೊಲೆರೋ ಜೀಪಿನಲ್ಲಿ ಕೊಟ್ಟಿ ಯೂರಿಗೆ ತೆರಳಿದ್ದರು. ಬಳಿಕ ಅವರು ಮರಳುತ್ತಿದ್ದಾಗ ಅವರ ಜೀಪಿನ ಮುಂದೆ ಬೈಕೊಂದು  ಸಂಚರಿಸುತ್ತಿತ್ತೆನ್ನಲಾಗಿದೆ. ಅದನ್ನು ಹಿಂದಿಕ್ಕಿ ಜೀಪು ಮುಂದಕ್ಕೆ ಸಂಚರಿಸಿದುದರಿಂದ ಬೈಕ್ ಸವಾರ ಹಾಗೂ ಜೀಪಿನಲ್ಲಿದ್ದವರ ಮಧ್ಯೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಬಳಿಕ ಅಲ್ಲಿಂದ ಪ್ರಯಾಣ ಮುಂದುವರಿಸಿದರು. ಅನಂತರ  ಕೊಕ್ಕತ್ತೋಡ್ ಎಂಬಲ್ಲಿಗೆ ತಲುಪಿದಾಗಿ ಜೀಪನ್ನು ಬೈಕ್‌ನ ಹಿಂಬದಿಗೆ ಢಿಕ್ಕಿ ಹೊಡೆಸಿರುವುದಾಗಿ ಹೇಳಲಾಗುತ್ತಿದೆ.  ಬೈಕ್‌ನಲ್ಲಿ  ನೆಲ್ಲಿಮುಂಡ ಕಳಪ್ಪುರಂನ ಇಬ್ರಾಹಿಂ ಎಂಬವರ ಪತ್ನಿ ಬೀಯುಮ್ಮ (56),  ಮೊಮ್ಮಗ ಅಫ್ಗನ್ (20) ಎಂಬಿವರು ಸಂಚರಿಸುತ್ತಿದ್ದರು. ಜೀಪು ಢಿಕ್ಕಿ ಹೊಡೆದ ಆಘಾತದಿಂದ ಗಂಭೀರ ಗಾಯಗೊಂಡ ಬೀಯುಮ್ಮ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕಲ್ಪೆಟ್ಟ ಡಿವೈಎಸ್ಪಿ  ಟಿ.ಸಿ.ಶೈಜು ಅವರ ನಿರ್ದೇಶ ಪ್ರಕಾರ ಮೇಪಾಡಿ ಇನ್‌ಸ್ಪೆಕ್ಟರ್ ಎ.ಯು. ಜಯಪ್ರಕಾಶ್ ತನಿಖೆ ನಡೆಸಿದರು. ಅಪಘಾತದಲ್ಲಿ ಗಾಯಗೊಂಡ ಅಫ್ಗನ್‌ನಿಂದ ದಾಖಲಿಸಿಕೊಂಡ ಹೇಳಿಕೆ ಹಾಗೂ ಸ್ಥಳೀಯರು ನೀಡಿದ ಮಾಹಿತಿಯನ್ನು ಪರಿಶೀಲಿಸಿದಾಗ ಅದು ಅಪಘಾತವಲ್ಲ, ಉದ್ದೇಶ ಪೂರ್ವಕವಾಗಿ ಜೀಪನ್ನು  ಬೈಕ್‌ಗೆ ಢಿಕ್ಕಿ ಹೊಡೆಸಲಾಗಿತ್ತೆಂದು ತಿಳಿದುಬಂದಿದೆ. ಇದರಂತೆ ಜೀಪು ಚಲಾಯಿಸುತ್ತಿದ್ದ ಅಖಿಲ್‌ನನ್ನು ಮೊದಲು ಮೇಪಾಡಿಯ ಠಾಣೆಗೆ ಕರೆಸಿ ಪೊಲೀಸರು ಹೇಳಿಕೆ ದಾಖಲಿಸಿ ಬಂಧಿಸಿದ್ದರು. ಅನಂತರ ಇತರ ನಾಲ್ಕು ಮಂದಿಯನ್ನು ಹೇಳಿಕೆ ದಾಖಲಿಸ ಲೆಂದು ಕರೆಸಿ ಬಳಿಕ ಬಂಧಿಸಲಾಗಿದೆ.

RELATED NEWS

You cannot copy contents of this page