ವರ್ಕಾಡಿ: ಪಂಚಾಯತ್ ವ್ಯಾಪ್ತಿಯ ಕಜೆ ಎಂಬಲ್ಲಿ ಭೂಮಿ ಕುಸಿದು ಅಪಾಯದ ಸ್ಥಿತಿ ಉಂಟಾ ಗಿದ್ದು, ಸುತ್ತಮುತ್ತಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಭೂಕು ಸಿತದ ಪರಿಣಾಮವಾಗಿ ಸುಮಾರು ೧೦ ಮೀಟರ್ ಆಳದ ಎರಡು ದೊಡ್ಡ ಗುಂಡಿಗಳು ಸೃಷ್ಟಿಯಾಗಿದೆ.
ಈ ಪ್ರದೇಶದ ವಿವಿಧ ಕಡೆಗಳಲ್ಲಿ ಭೂಮಿ ಕುಸಿದಿದ್ದು, ನೆಲ ಬಿರುಕು ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಾದ ಅವ್ವಮ್ಮ, ಆಸ್ಯಮ್ಮ, ಅಹ್ಮದ್ ಕುಂಞÂ ಇವರನ್ನು ಸ್ಥಳಾಂತರಿಸಲಾಗಿದೆ. ಊರವರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಾಲೂಕು, ಪಂಚಾಯತ್, ವಿಲೇಜ್ ಸಹಿತ ಇತರ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಪ್ರದೇಶದಲ್ಲಿ ಕಳೆದ ವರ್ಷ ಕೂಡಾ ಇದೇ ರೀತಿ ಭೂ ಕುಸಿತ ಉಂಟಾಗಿದ್ದು, ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು. ಈಗ ಮತ್ತೆ ಭೂ ಕುಸಿತ ಉಂಟಾಗಿರುವುದು ಊರವರಲ್ಲಿ ಆತಂಕ ಉಂಟುಮಾಡಿದೆ. ಎತ್ತರ ಪ್ರದೇಶ ಜರಿದು ಬಿದ್ದಿದ್ದು, ಮರಗಳು ಧರಾಶಾಯಿಯಾಗಿವೆ. ರಸ್ತೆ ಅಪಾಯದಂಚಿನಲ್ಲಿದೆ. ಈ ಪ್ರದೇಶವನ್ನು ಅಪಾಯಕರ ಪ್ರದೇಶವೆಂದು ಘೋಷಿಸಲು ಒತ್ತಾಯಿಸಲÁಗಿದೆ. ನೈಸರ್ಗಿಕ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಭೂಮಿ ಕುಸಿತದ ನಿಖರ ಕಾರಣಗಳನ್ನು ತಿಳಿಯಲು ಭೂಗರ್ಭ ತಜ್ಞರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರದೇಶದ ಜನತೆಗೆ ತಾತ್ಕಾಲಿಕವಾಗಿ ಆ ಭಾಗದಿಂದ ದೂರವಿರಲು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಲು ಸೂಚಿಸಲಾಗಿದೆ.
