ವರ್ಕಾಡಿ ಬಿಜೆಪಿ ನೂತನ ಕಾರ್ಯಾಲಯ ಉದ್ಘಾಟನೆ

ವರ್ಕಾಡಿ:  ಸುಂಕದಕಟ್ಟೆಯಲ್ಲಿ  ನೂತನವಾಗಿ ಆರಂಭಗೊಂಡ ಬಿಜೆಪಿ ಕಾರ್ಯಾಲಯವನ್ನು  ಜಿಲ್ಲಾ ಮಾಜಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು. ಅವರು ಮಾತನಾಡಿ ಕಾರ್ಯಕರ್ತರು ನಾಯಕರಾಗಿ ಬೆಳೆಯಬೇಕು. ಸಂಘಟನೆ, ಕಾರ್ಯ ಕರ್ತರಿಗೆ ಪಕ್ಷದ ಕಾರ್ಯಾಲಯ ದೇವಾಲಯದಂತೆ ಪವಿತ್ರವಾದದ್ದು ಎಂದು ನುಡಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಧ್ವಜಾರೋಹಣ ಗೈದರು.  ಅವರು ಮಾತನಾಡಿ ಕಾರ್ಯ ಕರ್ತರ ಕನಸು ಈಗ ಸಾಕ್ಷಾತ್ಕಾರ ಗೊಳಿಸಲಾಗಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ವರ್ಕಾಡಿ ಪಂಚಾಯತ್‌ನಲ್ಲಿ ಬಿಜೆಪಿ ಆಡಳಿತಕ್ಕೇರಲಿದೆಯೆಂದರು.    ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಭಾಸ್ಕರ ಪೊಯ್ಯೆ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಮುಖಂಡರಾದ ವಿಜಯ ಕುಮಾರ್ ರೈ, ಸುಧಾಮ ಗೋಸಾಡ, ದೂಮಪ್ಪ ಶೆಟ್ಟಿ, ಹರಿಶ್ಚಂದ್ರ ಮಂಜೇಶ್ವರ,ಸತೀಶ್ಚಂದ್ರ ಭಂಡಾರಿ, ಕೆ.ವಿ. ಭಟ್, ಯತಿರಾಜ್ ಶೆಟ್ಟಿ, ತುಳಸಿ ಕುಮಾರಿ, ಆನಂತ ತಚ್ಚಿರೆ ಮಾತನಾಡಿದರು. ಗೋಪಾಲ ಶೆಟ್ಟಿ, ನಾಗಪ್ಪ, ಜೀವನ್, ವಿವೇಕಾನಂದ, ಜಗದೀಶ್ ಚೆಂಡ್ಲ ನೇತೃತ್ವ ನೀಡಿದರು. ಜನಪ್ರತಿನಿಧಿಗಳು, ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದರು. ಗೋಪಿನಾಥ್ ವಂದೇ ಮಾತರಂ ಹಾಡಿದರು. ರಕ್ಷಣ್ ಅಡೆಕಳ ಸ್ವಾಗತಿಸಿ, ನಾಗೇಶ್ ಬಳ್ಳೂರು ವಂದಿಸಿದರು.

You cannot copy contents of this page