ವಶಕ್ಕೆ ತೆಗೆದುಕೊಂಡ ಆರೋಪಿಯನ್ನು ಪೊಲೀಸ್ ವಾಹನದಿಂದ ಇಳಿಸಲು ತಡೆಯೊಡ್ಡಿದ ಬಗ್ಗೆ ಕೇಸು

ಕಾಸರಗೋಡು: ವಶಕ್ಕೆ ತೆಗೆದ ಆರೋಪಿಯನ್ನು ವಾಹನದಲ್ಲಿ ಪೊಲೀಸ್ ಠಾಣೆಗೆ ತಂದು  ಅಲ್ಲಿ ಆತನನ್ನು ಇಳಿಸಲೆತ್ನಿಸಿದಾಗ ಅದಕ್ಕೆ ತಡೆಯೊಡ್ಡಿದ ಆರೋಪದಂತೆ ನಾಲ್ವರ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಉದುಮ ಞ್ಞಾಣಿಕಡವಿನ ಅನೂಪ್ (37), ಮುನ್ನಾಡಿನ ಸಿ. ರಾಜೇಂದ್ರನ್ (34), ಪೆರಿಯಾದ ಎ. ಶಮೀರ್ (32) ಮತ್ತು ಪೆರಿಯಾ ಮೊಯ್ಯಾಲದ ಟಿ. ರಾಹುಲ್ (23) ಎಂಬವರ ವಿರುದ್ಧ ಬೇಕಲ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರೊಂದಕ್ಕೆ ಸಂಬಂಧಿಸಿ ತನಿಖೆ ನಡೆಸಲೆಂದು ಹೋದ ಬೇಕಲ ಪೊಲೀಸರನ್ನು ಅಲ್ಲಿ ಆರೋಪಿ ಅನೂಪ್ ತಡೆದಿದ್ದನು. ಆಗ ಪೊಲೀಸರು ಆತನನ್ನು ತಮ್ಮ ಜೀಪಿಗೇರಿಸಿ ಬೇಕಲ ಪೊಲೀಸ್ ಠಾಣೆಗೆ ತಂದಿದ್ದರು. ಆಗ ಪೊಲೀಸ್ ವಾಹನವನ್ನು ಒಂದು ತಂಡ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಅನೂಪ್‌ನನ್ನು ಪೊಲೀಸರು ಠಾಣೆ ಬಳಿ  ಇಳಿಸಲೆತ್ನಿಸಿದಾಗ ಇನ್ನೊಂದು ವಾಹನದಲ್ಲಿ ಬಂದವರು ಅದನ್ನು ತಡೆದರೆಂದು ಆರೋಪಿಸಲಾಗಿದೆ. ಅದಕ್ಕೆ ಸಂಬಂಧಿಸಿ ಪೊಲೀಸರು ಈ ನಾಲ್ಕು ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page