ವಾಹನ ಅಪಘಾತದಲ್ಲಿ ಮೊಗ್ರಾಲ್ ಪುತ್ತೂರಿನ ಯುವಕರಿಬ್ಬರ ದುರ್ಮರಣ
ಕಾಸರಗೋಡು: ಬೈಕ್ ಮತ್ತು ಮೀನು ಲಾರಿ ಪರಸ್ಪರ ಢಿಕ್ಕಿ ಹೊಡೆದು ಮೊಗ್ರಾಲ್ ಪುತ್ತೂರಿನ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರು ತಾಳಾಪ್ಪಿಲ್‌ನಲ್ಲಿ ನಿನ್ನೆ ಮುಂಜಾನೆ ನಡೆದಿದೆ.
ಮೊಗ್ರಾಲ್ ಪುತ್ತೂರು ಸಮೀಪದ ಚೌಕಿ ಬದರ್ ನಗರದ ಪೆರಿಯಡ್ಕ ಹೌಸ್‌ನ ಮೊಹಮ್ಮದ್-ನಫೀಸಾ ದಂಪತಿಯ ಪುತ್ರ ಮನಾಫ್ (೨೧) ಮತ್ತು ಬದರ್‌ನಗರದ ರಫೀಕ್-ಜಮೀಲ ದಂಪತಿ ಪುತ್ರ ಲತೀಫ್ (೨೪) ಸಾವನ್ನಪ್ಪಿದ ದುರ್ದೈವಿಗಳು. ಇವರಿಬ್ಬರು ಸ್ನೇಹಿತರಾಗಿದ್ದಾರೆ.
ಇವರಿಬ್ಬರು ಬೈಕ್‌ನಲ್ಲಿ ಕಣ್ಣೂರು ಭಾಗದಿಂದ ನಿನ್ನೆ ಮುಂಜಾನೆ ಕಾಸರಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ಕಣ್ಣೂರು ತಳಾಪ್ಪಿಲ್ ಎಕೆಜಿ ಆಸ್ಪತ್ರೆ ಸಮೀಪದ ರಸ್ತೆಯಲ್ಲಿ ಆ ಬೈಕ್‌ಗೆ ಮೀನು ಹೇರಿಕೊಂಡು ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಗಂಭೀರ ಗಾಯ ಗೊಂಡ ಅವರಿಬ್ಬರನ್ನು ತಕ್ಷಣ ಸಮೀ ಪದ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿ ಸಲು ಸಾಧ್ಯವಾಗಲಿಲ್ಲ. ಈ ಘಟನೆಗೆ ಸಂಬಂಧಿಸಿ ಲಾರಿ ಚಾಲಕ ಮಂಗಳೂರು ನಿವಾಸಿ ಯೂಸುಫ್ ಹುಸೈನ್ ಎಂಬಾ ತನನ್ನು ಪೊಲೀಸರು ಬಂಧಿಸಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ಲತೀಫ್ ಕಾಸರಗೋಡು ತಳಂಗರೆ ರೂಟ್‌ನ ಖಾಸಗಿ ಬಸ್ಸೊಂದರ ಕಂಡಕ್ಕರ್ ಆಗಿ ಸೇವೆ ಸಲ್ಲಿಸುತ್ತಿದ್ದನ. ಕೆಲವು ದಿನಗಳಿಂದ ಆತ ಕೆಲಸಕ್ಕೆ ಹೋ ಗಿರಲಿಲ್ಲ. ಈತ ಹೆತ್ತವರ ಹೊರತಾಗಿ ಸಹೋದರ-ಸಹೋದರಿಯರಾದ ಆಯಿಷತ್ ಮಿಸ್ರಿಯಾ, ಫಾತಿಮತ್ ನಜಿಯಾ, ಮೊಹಮ್ಮದ್ ರಿಸ್ವಾನ್, ಮೊಹಮ್ಮದ್ ನಿನಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತ ಮನಾಫ್ ಹೆತ್ತವರ ಹೊರ ತಾಗಿ ಸಹೋದರ-ಸಹೋದರಿಯ ರಾದ ಮುಶ್‌ಹೂದ್, ಮುನೀರ್, ಹಾಶ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತಪಟ್ಟ ಯುವಕರ ಮೃತದೇಹಗಳನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊ ಪಡಿಸಲಾಯಿತು. ಈ ಇಬ್ಬರು ಯುವಕರ ಅಗಲುವಿಕೆ ಮೊಗ್ರಾಲ್ ಪುತ್ತೂರು ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದೆ.