ವಾಹನ ಅಪಘಾತ: ಇಬ್ಬರಿಗೆ ಗಾಯ

ಕುಂಬಳೆ: ಪಚ್ಚಂಬಳ ಹಾಗೂ ಕುಡಾಲ್‌ಮೇರ್ಕಳ ಕೊಕ್ಕೆಚ್ಚಾಲ್‌ನಲ್ಲಿ ನಿನ್ನೆ ಸಂಭವಿಸಿದ ಎರಡು ಅಪಘಾv ಗಳಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಪಚ್ಚಂಬಳದಲ್ಲಿ ಸ್ಕೂಟರ್ ಹಾಗೂ ಬೈಕ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಬಂದ್ಯೋಡು ಅಡ್ಕದ ಮೂಸ ಇಬ್ರಾಹಿಂ (೬೩) ಗಾಯಗೊಂಡಿದ್ದಾರೆ.  ಇವರನ್ನು  ಬಂದ್ಯೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕುಡಾಲ್‌ಮೇರ್ಕಳ ಕೊಕ್ಕೆ ಚ್ಚಾಲ್‌ನಲ್ಲಿ ಕಾರು ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಪೆರ್ಮುದೆಯ ಪ್ರಸನ್ನ ಡಿ ಸೋಜ (೩೫) ಗಾಯಗೊಂಡಿದ್ದಾರೆ. ಇವರನ್ನು ಬಂದ್ಯೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

You cannot copy contents of this page