ವಾಹನ ಅಪಘಾತ: ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತ್ಯು

ಕುಂಬಳೆ: ಬೈಕ್ ಹಾಗೂ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪದವಿ ವಿದ್ಯಾರ್ಥಿ ಮೃತಪಟ್ಟರ.

ಬಂಬ್ರಾಣ ಅಂಡಿತ್ತಡ್ಕ ನಂಬಿಡಿ ಹೌಸ್‌ನ ಖಾಲಿದ್ ಎಂಬವರ ಪುತ್ರ ಯೂಸಫ್ ಕೈಫ್ (19) ಮೃತಪಟ್ಟ ದುರ್ದೈವಿ. ಎಪ್ರಿಲ್ ೨೦ರಂದು ಬೆಳಿಗ್ಗೆ ೮.೩೦ಕ್ಕೆ ಉಪ್ಪಳ ಕುಕ್ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು. ಮಂಗಳೂರಿನಲ್ಲಿ ಪದವಿ ವಿದ್ಯಾರ್ಥಿ ಯಾದ ಯೂಸಫ್ ಕೈಫ್ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ನೀರು ಸಾಗಿಸು ತ್ತಿದ್ದ ಟ್ಯಾಂಕರ್  ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡ ಯೂಸಫ್ ಕೈಫ್‌ನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆಯ ಲ್ಲಿದ್ದ ಇವರನ್ನು ನಿನ್ನೆ ಸಂಜೆ ಕಾಸರ ಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸ ಲಾಗಿತ್ತು. ಆದರೆ ೭ ಗಂಟೆ ವೇಳೆ ನಿಧನ ಸಂಭವಿಸಿದೆ. ಮೃತರು ತಂದೆ, ತಾಯಿ ಫಮೀದ, ಸಹೋದರ-ಸಹೋದರಿ ಯರಾದ ಕಾಸಿಫ್, ಲಿಯ, ಲಿಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಇಂದು ಮುಂಜಾನೆ 7 ಗಂಟೆಗೆ ಬಂಬ್ರಾಣ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು. ಯೂಸಫ್ ಕೈಫ್‌ರ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.

You cannot copy contents of this page